ಹೊಸದಿಗಂತ ವರದಿ,ರಾಯಚೂರು(ಸಿಂಧನೂರು) :
ಜಿಲ್ಲೆ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ ಸಮೀಪದಲ್ಲಿ ಗುರುವಾರ ಬೆಳಗಿನ ಜಾವ ೫ ಗಂಟೆ ಸಮಯದಲ್ಲಿ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರ ದುರ್ಮರಣ ಸಂಭವಿಸಿ ಓರ್ವ ತೀರ್ವವಾಗಿ ಗಾಯಗೊಂದಿದ್ದಾನೆ.
ಮೃತ ವ್ಯಕ್ತಿಗಳನ್ನು ಮಸ್ಕಿ ತಾಲ್ಲೂಕಿನ ಕುಣೆಕಲ್ಲೂರು ಗ್ರಾಮದ ಅಮರೇಶ ಸೂಗಪ್ಪ, ರವಿ ಬುಕ್ಕನಹಟ್ಟಿ, ಸಿಂಧನೂರ ನಗರದ ಮಹಿಬೂಬ ಕಾಲೋನಿಯ ಟಾಟಾ ಏಸ್ ವಾಹನ ಚಾಲಕ ಮಹ್ಮದ ಇಸ್ಮಾಯಿಲ್. ಇನ್ನೊಬ್ಬ ಬಂಗಾಲಿ ಕ್ಯಾಂಪ ನಿವಾಸಿ ಚನ್ನಬಸವ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಮಸ್ಕಿ ತಾಲ್ಲೂಕಿನ ದುರ್ಗಾ ಕ್ಯಾಂಪನಲ್ಲಿ ನಡೆಯುವ ಮದುವೆ ಮನೆಗೆ ಸಿಂಧನೂರು ನಗರದ ಸಾಯಿ ಸಂಗಮ ಸಪ್ಲಾಯರಸ್ಸ್ ವತಿಯಿಂದ ಡೆಕ್ಯೋರೇಷನ್ ಮಾಡಲು ಸಾಮಾನುಗಳನ್ನು ಟಾಟಾ ಏಸ್‌ನಲ್ಲಿ ತೆಗೆದುಕೊಂಡು ೫ ಜನ ಕೂಲಿಕಾರರು ಹೊಗುವಾಗ ಮಸ್ಕಿಯಿಂದ ಸಿಂಧನೂರು ಕಡೆಗೆ ಬರುತ್ತಿರುವ ಸಂದರ್ಭದಲ್ಲಿ ಲಾರಿ-ಟಾಟಾ ಏಸ್ ನಡುವೆ ಮುಖಾ ಮುಖಿ ಡಿಕ್ಕಿ ಯಾಗಿ ಈ ಘಟನೆ ಸಂಭವಿಸಿದೆ.
ಗಾಯಗೊಂಡ ವ್ಯಕ್ತಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ ಕಳಿಸಲಾದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿ ಯಾಗಿದ್ದಾನೆ. ಘಟನಾ ಸ್ಥಳ ಹಾಗೂ ಆಸ್ಪತ್ರೆಯ ಆವರಣಕ್ಕೆ ಆಗಮಿಸಿದ್ದ ಮೃತ ವ್ಯಕ್ತಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.