ಸಿಗರೇಟ್ ಸೇದುತ್ತಿದ್ದೆ, ಆಯಸ್ಸು ಕಡಿಮೆ ಆಗುತ್ತೆ ಅಂತ ಸೆದೋದು ಬಿಟ್ಟೆ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನು ಹಿಂದೆ ಸಿಗರೇಟ್ ಸೇದುತ್ತಿದ್ದೆ.ಆದ್ರೆ ಆಯಸ್ಸು ಕಡಿಮೆ ಆಗುತ್ತೆ ಅಂತ ಸಿಗರೇಟ್ ಸೆದೋದು ಬಿಟ್ಟೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಜೀವನದ ಹಳೆ ವಿಚಾರವನ್ನುಹಂಚಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜನರಿಗೆ ಆಹಾರ ಪದ್ದತಿ ಮತ್ತು ಜೀವನ ಶೈಲಿ ಬದಲಾವಣೆ ಮಾಡಿಕೊಂಡರೇ ರೋಗ ಕಂಟ್ರೋಲ್ ಮಾಡಬಹುದು ಅಂತ ಸಲಹೆ ಕೊಟ್ಟರು. ನಾನು ಹಿಂದೆ ಸಿಗರೇಟ್ ಸೇದುತ್ತಿದ್ದೆ. ಸಿಗರೇಟ್ ಸೇದಿದ್ರೆ ಆಯಸ್ಸು ಕಡಿಮೆ‌ ಆಗುತ್ತೆ ಅಂತ ಹೇಳಿದ್ರು. ಅದಕ್ಕೆ ಸಿಗರೇಟ್ ಸೇದೋದು ಬಿಟ್ಟೆ ಎಂದರು.

1987 ರಲ್ಲಿ ಸಿಗರೇಟ್ ಬಿಟ್ಟೆ. ಸಿಗರೇಟ್ ಸೇದಿದ್ದರಿಂದ ನನಗೆ ಹಾರ್ಟ್ ಪ್ರಾಬ್ಲಂ ಶುರುವಾಯ್ತು. 2000 ರಲ್ಲಿ ಆಂಜಿಯೋಪ್ಲ್ಯಾಸ್ಟಿ ಮಾಡಿಸಿಕೊಂಡೆ. ಹಾರ್ಟ್ ಸಮಸ್ಯೆ ಜೊತೆಗೆ ಡಯಾಬಿಟಿಕ್ ಕೂಡಾ‌ ಸೇರಿಕೊಂಡಿದೆ. ನಮ್ಮ ಆಹಾರ ಪದ್ಧತಿ, ಜೀವನ‌ ಶೈಲಿ ಬದಲಾವಣೆ ‌ಮಾಡಿಕೊಂಡರೇ‌ ಅನೇಕ ರೋಗ ಕಂಟ್ರೋಲ್ ಆಗುತ್ತದೆ ಅಂತ‌ ಜನರಿಗೆ ಸಿಎಂ ಸಲಹೆ ಕೊಟ್ಟರು.

ವೈದ್ಯ ವೃತ್ತಿ ಪವಿತ್ರವಾದ ವೃತ್ತಿ‌. ಅದಕ್ಕೆ ವೈದ್ಯೋ ನಾರಾಯಣೋ ಹರಿ ಅಂತ ಕರೆಯುತ್ತಾರೆ. ವೈದ್ಯರು ದೇವರಿಗೆ ಸಮಾನರು. ಸಮಾಜದ ಸ್ವಾಸ್ಥ್ಯ ಕಾಪಾಡೋರು ವೈದ್ಯರು. ಎಲ್ಲರ ಆರೋಗ್ಯ ರಕ್ಷಣೆ ಮಾಡ್ತಾರೆ ವೈದ್ಯರು. ವೈದ್ಯಕೀಯ ವೃತ್ತಿ ಬಹಳ ಸ್ಮರಣೆ ಮಾಡಿಕೊಳ್ಳಬೇಕಾಗಿದ್ದು ಕೊರೊನಾ ಸಮಯದಲ್ಲಿ ನೀವು ಮಾಡಿದ ಸೇವೆ. ಕೊರೊನಾ ಸಮಯದಲ್ಲಿ ನೀವು ಹೊರಗೆ ಬಂದು ರೋಗಿಗಳಿಗೆ ಆರೋಗ್ಯ ರಕ್ಷಣೆ ಮಾಡಿದ್ದೀರಾ. ನಿಮ್ಮ ಸೇವೆ ಮರೆಯೋಕೆ ಸಾಧ್ಯವಿಲ್ಲ ಅಂತ ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!