ದಸರಾಗೆ ಊರಿಗೆ ಹೋಗ್ಬೇಕು, ಆದರೆ ಖಾಸಗಿ ಬಸ್‌ ದರ ಕೇಳಿ ಜನರು ಕಂಗಾಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗೌರಿ ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ ಹೀಗೆ ಹಬ್ಬಗಳ ಸೀಸನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರು ಮನಸಿಗೆ ಬಂದಷ್ಟು ರೇಟ್‌ ಹೇಳಿಬಿಡುತ್ತಾರೆ.

ದಸರಾ ಬಂತು, ಮನೆಗೆ ಹೋಗೋಣ, ಒಂದೆರಡು ದಿನ ಇರೋಣ ಎಂದು ಕಾದು ಕುಳಿತಿದ್ದ ಜನರಿಗೆ ಬಸ್‌ ಮಾಲೀಕರು ಶಾಕ್‌ ನೀಡಿದ್ದಾರೆ.

ಶುಕ್ರವಾರ ಆಯುಧ ಪೂಜೆ, ಶನಿವಾರ ವಿಜಯದಶಮಿ, ಭಾನುವಾರ ಹೇಗೂ ರಜೆ ಇದ್ದು, ಒಟ್ಟು ಮೂರು ದಿನಗಳ ಕಾಲ ರಜೆ. ಹೀಗಾಗಿ ಗುರುವಾರವೇ ಊರಿಗೆ ತೆರಳಲು ಜನರು ಮುಂದಾಗಿದ್ದರು. ಆದರೆ ಖಾಸಗಿ ಬಸ್​ಗಳಲ್ಲಿ ಟಿಕೆಟ್ ದರ ದುಪ್ಪಟ್ಟು ಏರಿಕೆ ಆಗಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು-ಹಾವೇರಿ: 1200-4000, ಬೆಂಗಳೂರು-ದಾವಣಗೆರೆ: 1200-4000, ಬೆಂಗಳೂರು-ಕೋಲಾರ: 90-3000, ಬೆಂಗಳೂರು-ಶಿವಮೊಗ್ಗ: 950-4000, ಬೆಂಗಳೂರು-ಹಾಸನ: 1200-1500, ಬೆಂಗಳೂರು ಮಂಗಳೂರು: 1200-2700, ಬೆಂಗಳೂರು-ಮೈಸೂರು: 250-2500, ಬೆಂಗಳೂರು-ಹುಬ್ಬಳ್ಳಿ: 1500-3800, ಬೆಂಗಳೂರು-ಧಾರವಾಡ: 1400-3500, ಬೆಂಗಳೂರು-ಮಂಡ್ಯ: 237-900 ರೂ.ನಷ್ಟು ದರ ಇಡಲಾಗಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!