ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುನೀತ್ ರಾಜ್ಕುಮಾರ್ ಕೋಟ್ಯಂತರ ಅಭಿಮಾನಿಗಳಿಗೆ ಸ್ಪೂರ್ತಿ .ಅದು ಕೇವಲ ಸಾಮಾನ್ಯ ಜನರಿಗೆ ಮಾತ್ರವೇ ಅಲ್ಲ, ಸಿನಿಮಾ ತಾರೆಯವರಿಗೂ ಸ್ಪೂರ್ತಿ. ಬಾಲಿವುಡ್ ನಟಿಯೊಬ್ಬರು ಇದೀಗ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿದ್ದು, ಮಾತ್ರವಲ್ಲದೆ, ಅವರ ವ್ಯಕ್ತಿತ್ವದಿಂದ ಪ್ರೇರಣೆ ಪಡೆದಿದ್ದಾರೆ.
‘ದಿ ಕೇರಳ ಸ್ಟೋರಿ’, ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’, ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಅದಾ ಶರ್ಮಾ, ಕೇವಲ ಒಂದೇ ಒಂದು ಕನ್ನಡ ಸಿನಿಮಾನಲ್ಲಿ ಮಾತ್ರವೇ ನಟಿಸಿದ್ದಾರೆ. ಅದು ಪುನೀತ್ ರಾಜ್ಕುಮಾರ್ ನಟನೆಯ ‘ರಣ ವಿಕ್ರಮ’.
ಆದ್ರೂ ನಟ ಪುನೀತ್ ರಾಜ್ಕುಮಾರ್ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದಾರೆ. ಪುನೀತ್ ರಾಜ್ಕುಮಾರ್, ಅದಾ ಶರ್ಮಾ ನಟನೆಯ ‘ರಣವಿಕ್ರಮ’ ಸಿನಿಮಾ 2015 ರ ಏಪ್ರಿಲ್ 10 ರಂದು ಬಿಡುಗಡೆ ಆಗಿತ್ತು. ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ನಟಿ ಅದಾ ಶರ್ಮಾ, ‘ಬೆಂಗಳೂರು ಏರ್ಪೋರ್ಟ್ನಿಂದ ನಾನು ಉಳಿದುಕೊಂಡಿದ್ದ ಹೋಟೆಲ್ಗೆ ಹೋಗುವಷ್ಟರಲ್ಲಿ ಸುಮಾರು 50 ಹೋಲ್ಡಿಂಗ್ಸ್ಗಳಲ್ಲಿ ಪುನೀತ್ ಅವರ ಫೋಟೊ ಇತ್ತು. ಎಲ್ಲವೂ ದೊಡ್ಡ ಬ್ರ್ಯಾಂಡ್ಗಳು. ಶೂಟಿಂಗ್ ಸೆಟ್ನ ಬಳಿಯೂ ಎಷ್ಟೋಂದು ಜನ ಅವರಿಗಾಗಿ ಕಾಯುತ್ತಿದ್ದರು. ಆದರೆ ಎಲ್ಲರನ್ನೂ ಅವರು ಶಾಂತವಾಗಿ ಭೇಟಿ ಆದರು. ಎಲ್ಲರೂ ನನಗೆ ನೀನು ಅದೃಷ್ಟವಂತೆ ದೊಡ್ಡ ಸ್ಟಾರ್ ಜೊತೆ ನಟಿಸುತ್ತಿದ್ದೀರ ಎನ್ನುತ್ತಿದ್ದರು’ ಎಂದು ಅದಾ ಶರ್ಮಾ ನೆನಪು ಮಾಡಿಕೊಂಡಿದ್ದಾರೆ.
ಪುನೀತ್ ಅವರೊಟ್ಟಿಗೆ ನಟಿಸುವಾಗ ನರ್ವಸ್ ಆಗಿದ್ದೆ. ಆದರೆ ಪುನೀತ್ ತಮ್ಮ ಸ್ಟಾರ್ಡಮ್ಗೆ ವಿರುದ್ಧವಾಗಿ ಬಹಳ ವಿನಯದಿಂದ, ಫ್ರೆಂಡ್ಲಿಯಾಗಿ ನಡೆದುಕೊಂಡರು. ಪ್ರತಿದಿನ ನಿಗದಿತ ಸಮಯಕ್ಕೆ ಸೆಟ್ಗೆ ಬರುತ್ತಿದ್ದರು. ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿದ್ದರೂ ಸಹ ರಿಹರ್ಸಲ್ ತಪ್ಪಿಸುತ್ತಿರಲಿಲ್ಲ. ಶೂಟ್ ಮಾಡುವಾಗ 45 ಡಿಗ್ರಿ ಬಿಸಿಲು ಇರುತ್ತಿತ್ತು, ಆದರೆ ಸೆಟ್ನಲ್ಲಿ ಎನರ್ಜಿ ಡ್ರಾಪ್ ಆಗದಂತೆ ನೋಡಿಕೊಳ್ಳುತ್ತಿದ್ದರು. ಎಲ್ಲರೊಟ್ಟಿಗೆ ಮಾತನಾಡುತ್ತಾ ಎನರ್ಜಿ ತುಂಬುತ್ತಿದ್ದರು. ಸಹನಟರೊಟ್ಟಿಗೆ ಹೊಂದಿಕೊಂಡು ನಟಿಸುತ್ತಿದ್ದರು’ ಎಂದಿದ್ದಾರೆ ಅದಾ ಶರ್ಮಾ.
ನಾನು ಎಂದಾದರೂ ಪುನೀತ್ ಅವರಂತೆ ಸ್ಟಾರ್ ಆದರೆ ನಾನೂ ಸಹ ಅವರಂತೆ ನಡೆದುಕೊಳ್ಳಬೇಕು, ಅವರಂತೆ ವಿನಯದಿಂದ ಇರಬೇಕು, ಎಲ್ಲರನ್ನೂ ಪ್ರೀತಿಸಬೇಕು ಎಂದುಕೊಂಡಿದ್ದರಂತೆ ಅದಾ ಶರ್ಮಾ. ಪುನೀತ್ ಅವರು ಎಲ್ಲಿಯೇ ಇರಲಿ ಅವರಿಗೆ ನನ್ನ ಧನ್ಯವಾದ’ ಎಂದಿದ್ದಾರೆ ನಟಿ.