ಹೊಸದಿಗಂತ ವರದಿ, ವಿಜಯಪುರ:
ನನಗೆ ಟಿಕೆಟ್ ಸಿಗುವುದು ಬಿಡುವುದು ಎಂ.ಬಿ. ಪಾಟೀಲರಿಗೆ ಸಂಬಂಧಿಸಿದ ವಿಷಯವಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಖಾರವಾಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರು ನಮ್ಮ ಪಕ್ಷದಲ್ಲಿಲ್ಲ. ಬೇಕಾದರೆ ನಮ್ಮ ಪಕ್ಷಕ್ಕೆ ಬಂದು ಹೇಳಲಿ ಆಗ ನೋಡೋಣ, ಹಾಗೆಂದ ಮಾತ್ರಕ್ಕೆ ನಾನೇನೂ ಪಾಟೀಲರಿಗೆ ಬಿಜೆಪಿಗೆ ಆಹ್ವಾನ ನೀಡುತ್ತಿಲ್ಲ. ನಮ್ಮಲ್ಲೇನೂ ನಾಯಕರ ಕೊರತೆ ಇಲ್ಲ, ನನಗೆ ಟಿಕೆಟ್ ಕೊಡುವುದು ಬಿಡುವುದು ನಮ್ಮ ಪಕ್ಷಕ್ಕೆ ಬಿಟ್ಟ ವಿಷಯ ಎಂದರು.
ನಾನು ಕಾಂಗ್ರೆಸ್ ವಿರೋಧಿಯಾಗಿಯೇ ಜನ್ಮತಾಳಿದ್ದೇನೆ, ಕಾಂಗ್ರೆಸ್ ವಿರೋಧಿಯಾಗಿಯೇ ರಾಜಕಾರಣ ಮಾಡಿದ್ದೇನೆ, ಈಗ ಪಕ್ಷ ಬದಲಾಯಿಸಿ ರಾಜಕಾರಣ ಮಾಡುವ ಔಚಿತ್ಯವೂ ನನಗಿಲ್ಲ, ಕಾಂಗ್ರೆಸ್ ಹೋಗುವ ಪ್ರಶ್ನೆಯೇ ಇಲ್ಲ, ಬಿಜೆಪಿ ಟಿಕೆಟ್ ಸಿಗುವುದು ಖಾತ್ರಿಯಾಗಿದೆ, ನನಗೂ ಸಹ ತಯಾರಿ ಮಾಡಿಕೊಳ್ಳುವಂತೆ ಸೂಚನೆಯೂ ಸಹ ದೊರಕಿದೆ, ಪಕ್ಷದವರು ಟಿಕೆಟ್ ನೀಡಿದರೆ ನಾನು ಚುನಾವಣೆಗೆ ಸ್ಪರ್ಧೆ ಮಾಡುವೆ, ಇಲ್ಲವಾದರೆ ಮನೆಯಲ್ಲಿಯೇ ಇರುವೆ ಎಂದರು.