ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಭಲ್ ಗಲಭೆ ನಡೆದಾಗ ನಾನು ಬೆಂಗಳೂರಿನಲ್ಲಿದ್ದೆ ಎಂದು ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ ಸ್ಪಷ್ಟನೆ ನೀಡಿದ್ದಾರೆ.
ಸಂಭಲ್ ಹಿಂಸಾಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಭಲ್ ನಲ್ಲಿ ನಡೆದ ಪೊಲೀಸ್ ದೌರ್ಜನ್ಯದ ಘಟನೆಗಳು ಮಾನವೀಯತೆಯನ್ನು ಬೆಚ್ಚಿಬೀಳಿಸಿದೆ. ಅಲ್ಲದೆ ದೇಶಕ್ಕೆ ಹಾಗೂ ಘನತೆಗೆ ಧಕ್ಕೆ ತಂದಿದೆ ಎಂದರು.
ಸಂಭಲ್ ನಲ್ಲಿ ಗಲಭೆ ನಡೆದಾಗ ನಾನು ಸಂಭಲ್ ನಲ್ಲಿ ಇರಲಿಲ್ಲ. ನಾನು ಭಾರತದ ಮುಸ್ಲಿಂ ವೈಯಕ್ತಿಕ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದೆ. ಆದರೆ ಪೊಲೀಸರು ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ಇದು ನನ್ನ ವಿರುದ್ಧ ಪೋಲೀಸರ ಸಂಚು. ಪೊಲೀಸರು ಯಾವಾಗ ತನಿಖೆಗೆ ಬರುತ್ತಾರೆ ಎಂಬುದೇ ಜನರಿಗೆ ತಿಳಿಯದಿರುವಾಗ ಷಡ್ಯಂತ್ರ ರೂಪಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಗಲಭೆಯಲ್ಲಿ ಐವರು ಅಮಾಯಕರು ಗುಂಡಿಗೆ ಬಲಿಯಾದರು. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಪೊಲೀಸರು ನಮ್ಮ ವಿರುದ್ಧ ಸುಳ್ಳು ವರದಿ ದಾಖಲಿಸಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.