ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಕ್ರಿಕೆಟ್ ಉತ್ಸವ 2025 ರ ಹರಾಜು ಪ್ರಕ್ರಿಯೆಯು ಪ್ರಾರಂಭವಾಗಿದೆ ಮತ್ತು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಹರಾಜಿನ ಎರಡನೇ ದಿನವಾದ ಇಂದು ಫ್ರಾಂಚೈಸಿಗಳು ತಮ್ಮ ಉತ್ತಮ ಆಟಗಾರರ ಮೇಲೆ ಕೊಟ್ಯಾಂತರ ರೂ. ಹಣ ಸುರಿಯಲು ಮುಂದಾಗಿದ್ದಾರೆ.
ಐಪಿಎಲ್ ಜ್ವರ ಶುರುವಾಗಿದೆ. 18 ನೇ IPL 2025 ರ ಬಿಡ್ ಪ್ರಕ್ರಿಯೆಯು ನಿನ್ನೆ ಪ್ರಾರಂಭವಾಯಿತು. ಹರಾಜಿನ ಎರಡನೇ ದಿನವಾದ ಇಂದು, ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರು ಯಾವ ತಂಡವನ್ನು ಸೇರುತ್ತಾರೆ ಎಂಬುದನ್ನು ನೋಡಲು ಇನ್ನೂ ಕಾತುರದಿಂದ ಕಾಯುತ್ತಿದ್ದಾರೆ.
ನಿನ್ನೆ ನಡೆದ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಹೀಗಾಗಿ ಇಂದು ಫ್ರಾಂಚೈಸಿಗಳು ಯಾವ ಆಟಗಾರರ ಮೇಲೆ ದುಡ್ಡಿನ ಮಳೆ ಸುರಿಸಲಿದೆ ಎಂದು ಕಾದು ನೋಡಬೇಕಾಗಿದೆ.