ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ ನಿನ್ನೆ ತಮ್ಮ ಪ್ರೀತಿಪಾತ್ರರಾದ ತಾಯಿಯನ್ನು ಕಳೆದುಕೊಂಡಿದ್ದಾರೆ. ಅಮ್ಮ ಎದ್ದೇಳೆ ಎಂದು ಕಣ್ಣೀರಿಟ್ಟಿದ್ದಾರೆ.
ಇಂದು ತಾಯಿಯ ಸಾವಿನ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದು, ಅಮ್ಮ ಅಡ್ಮಿಟ್ ಆಗಿದ್ದಾರೆ ಅಂತ ಗೊತ್ತಾದಾಗ ಶೂಟಿಂಗ್‌ನಲ್ಲಿದ್ದೆ ಎಂದು ಹೇಳಿಕೊಂಡಿದ್ದಾರೆ.
ಪ್ರತಿ ದಿನ ಅಮ್ಮ ಗುಡ್ ಮಾರ್ನಿಂಗ್ ಕಂದ ಎನ್ನುವ ಮೆಸೇಜ್ ಕಳಿಸ್ತಾರೆ, ಆ ದಿನ ನನಗೆ ಮೆಸೇಜ್ ಬರಲಿಲ್ಲ. ನಾನೇ ಮೆಸೇಜ್ ಮಾಡಿ ಸುಮ್ಮನಾದೆ. ಆಮೇಲೆ ಕಾಲ್ ಮಾಡಿ ವಿಚಾರಿಸೋಣ ಎಂದುಕೊಂಡೆ. ಆದರೆ ಶೂಟಿಂಗ್ ಕಡೆ ಗಮನದಲ್ಲಿ ಬ್ಯುಸಿ ಆದೆ. ನಾನು ಇನ್ನೇನು ಸ್ಟೇಜ್‌ಮೇಲೆ ಹೋಗಬೇಕು ಎಂದಾಗ ಮನೆಯಿಂದ ಫೋನ್ ಬಂತು. ಅಮ್ಮನನ್ನು ಅಡ್ಮಿಟ್ ಮಾಡಿದ್ದಾರೆ ಎಂದು ಅಕ್ಕ ಹೇಳಿದ್ರು.
ಮೊದಲ ಬಾರಿ ಹೆಲ್ಪ್‌ಲೆಸ್ ಫೀಲ್ ಆಗಿತ್ತು. ಶೂಟಿಂಗ್ ಅರ್ಧಕ್ಕೆ ಬಿಡೋಕಾಗಲ್ಲ, ಹಾಸ್ಪಿಟಲ್‌ಗೆ ಓಡಿ ಹೋಗೋಕಾಗಲ್ಲ! ನನ್ನಮ್ಮ ಕಲಿಸಿದ ಪಾಠ ಇದೆ, ಶಾಂತವಾಗಿ ಶೂಟಿಂಗ್ ಮುಗಿಸಿದೆ, ಲಾಸ್ಟ್ ಬ್ರೇಕ್ ಅನ್ನೋವಷ್ಟರಲ್ಲಿ ಅಮ್ಮನ ಸ್ಥಿತಿ ಕ್ರಿಟಿಕಲ್ ಎಂಬ ಕರೆ ಬಂತು. ನಡುಗಿ ಹೋಗಿದ್ದೆ. ಮುಖದಲ್ಲಿ ತೋರಿಸದೆ ಶೂಟಿಂಗ್ ಮುಗಿಸಿ ನಂತರ ಆಸ್ಪತ್ರೆಗೆ ಬಂದೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.