ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಮ್ಯಾಗೆ ಹೃದಯಾಘಾತವಾಗಿದೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು, ಈ ಬಗ್ಗೆ ರಮ್ಯಾ ಮಾತನಾಡಿದ್ದಾರೆ. ಜೆನೆವಾದಲ್ಲಿ ಸುಖನಿದ್ದೆಯಲ್ಲಿದೆ, ಕರೆ ಮೇಲೆ ಕರೆ ಬರ್ತಾನೇ ಇದೆ, ನಾನು ಆರೋಗ್ಯವಾಗಿದ್ದೇನೆ. ಯಾರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದು ಎಂದು ರಮ್ಯಾ ಗರಂ ಆಗಿದ್ದಾರೆ.
ಸುದ್ದಿ ಕೇಳಿ ಗಾಬರಿಯಾದ ರಮ್ಯಾ ಸ್ನೇಹಿತೆ ಧನ್ಯಾ ರಮ್ಯಾಗೆ ಕರೆ ಮಾಡಿದಾಗ ಈ ರೀತಿ ರಮ್ಯಾ ಹೇಳಿದ್ದಾರೆ. ಸದ್ಯ ರಮ್ಯಾ ಯುರೋಪ್ ಪ್ರವಾಸದಲ್ಲಿದ್ದಾಳೆ, ಹಾಯಾಗಿ ನಿದ್ದೆ ಮಾಡ್ತಿದ್ಲು, ನನ್ನ ಕರೆಯಿಂದ ಎದ್ದಳು, ಈ ರೀತಿ ಜವಾಬ್ದಾರಿ ಇಲ್ಲದ ಸುದ್ದಿ ಮಾಡಿದ್ಯಾರು? ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ಯಾರು? ಶೇಮ್ ಆನ್ ಯು ಎಂದು ಬರೆದುಕೊಂಡಿದ್ದಾರೆ.