ನನ್ನ ಜೊತೆ ಜೆಡಿಎಸ್ ನ 12 ಜನ ಬಂದ ಕೂಡಲೇ ಘೋಷಣೆ ಮಾಡುತ್ತೇನೆ: ಸಿಎಂ ಇಬ್ರಾಹಿಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನನ್ನನ್ನು ಯಾರೂ ಉಚ್ಚಾಟನೆ ಮಾಡಿಲ್ಲ. ನಮ್ಮಪ್ಪ ನನ್ನ ಜೆಡಿಎಸ್ ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ. 9 ಕ್ಕೆ ಅವರು ಮೀಟಿಂಗ್ ಕರೆದಿದ್ದಾರೆ. ಅವರ ಮೀಟಿಂಗ್‌ಗೆ ಯಾರು ಬರ್ತಾರೆ, ನಮ್ಮ ಮೀಟಿಂಗ್‌ಗೆ ಯಾರು ಬರ್ತಾರೆ ಅಂತ ನೋಡಿ. ನಾನು ಯಾವ ಶಾಸಕರನ್ನೂ ಸಭೆಗೆ ಕರೆದಿಲ್ಲ. 5 ಮಂದಿ ಶಾಸಕರು ನಮ್ಮ ಜೊತೆಗೆ ಇದ್ದಾರೆ. ಅದರೆ 12 ಜನ ಆಗಲಿ ಎಂದು ಕಾಯುತ್ತಿದ್ದೇನೆ. 12 ಜನ ಬಂದ ಕೂಡಲೇ ನಾನೇ ಪ್ರೆಸ್‌ಮೀಟ್ ಮಾಡುತ್ತೇನೆ ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಸಿಎಂ ಇಬ್ರಾಹಿಂ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿಯವರೇ ಮೊದಲು ನಿಮ್ಮ ಆರೋಗ್ಯ ನೋಡಿಕೊಳ್ಳಿ. ನೀವು ಕೇಶವ ಕೃಪದಲ್ಲಿ ಬಾಳಲಾರಿರಿ. ನೀವು ಏನು, ನಿಮ್ಮ ಮನಸ್ಥಿತಿ ಏನು ಅನ್ನೋದು ನನಗೆ ಗೊತ್ತಿದೆ. ಮತ್ತೆ ನೀವು ಇಲ್ಲಿಗೇ ಬರಬೇಕು, ಬೇರೆ ವಿಧಿಯಿಲ್ಲ ಎಂದು ಕಾಲೆಳೆದಿದ್ದಾರೆ

ದೇವೇಗೌಡರಿಗೆ ವಯಸ್ಸಾಗಿದೆ, ಸ್ವಯಂ ನಿರ್ಧಾರ ತೆಗೆದುಕೊಳ್ಳಲಾರರು. ಐವರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಜನವರಿ ನಂತರ ಒಂದು ಅಂತಿಮ ತೀರ್ಮಾನ ತಿಳಿಸುತ್ತೇವೆ. ದೇವೆಗೌಡರು, ಕುಮಾರಸ್ವಾಮಿಯವರ ಆರೋಗ್ಯದ ದೃಷ್ಠಿಯಿಂದ ನಾನು ಕೆಲಸ ನಿಧಾನಕ್ಕೆ ಮಾಡುತ್ತಿದ್ದೇನೆ. ಅವರಿಗೆ ಟೆನ್ಷನ್ ಕೊಡಬಾರದು ಅಂತ ಕೆಲಸ ನಿಧಾನ ಮಾಡಿದ್ದೇನೆ ಎಂದರು.

ಕುಮಾರಸ್ವಾಮಿಯವರೇ ನೀವು ಅಶೋಕ್, ಯಡಿಯೂರಪ್ಪ ಮಗನ ಹಿಂದೆ ಓಡಾಡ್ಬೇಕು. ಬಿಜೆಪಿಯವರೇ ಅವರ ಹಿಂದೆ ನಿಲ್ಲೋಕೆ ರೆಡಿ ಇಲ್ಲ. ಅದರೆ ನೀವು ಅವರ ಹಿಂದೆ ನಿಲ್ಲೋಕೆ ರೆಡಿಯಾಗಿದ್ದೀರಿ. ಎಲ್ಲರಿಗೂ ಬಕೆಟ್ ಹಿಡಿಯಲು ಕುಮಾರಸ್ವಾಮಿ ಹೋಗಿದ್ದಾರೆ. ಕುಮಾರಸ್ವಾಮಿ ನನ್ನ ಬ್ರದರ್, ಅವರ ಮೇಲೆ ಕೋಪ ಇಲ್ಲ. ಅವರಿಗೆ ಗೊತ್ತಾಗುತ್ತದೆ ಅವರ ಜೊತೆ ಹೋಗಿದ್ದು ತಪ್ಪು ಅಂತ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!