ಕರ್ನಾಟಕಕ್ಕೆ ನಾನು ಸಿಎಂ ಆಗೇ ಆಗ್ತೀನಿ: ಯತ್ನಾಳ್ ಸ್ಫೋಟಕ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ನಾನು ಬರ್ತೀನಿ, ಸಿಎಂ ಆಗೇ ಆಗ್ತೀನಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಯಾರಾದ್ರೂ ಮುಖ್ಯಮಂತ್ರಿ ಆಗ್ತಿನಿ ಅಂತ ಅಂಗಿ ಹೊಲಿಸಿಕೊಂಡು ಕೂತಿದ್ರೆ ಕೂರ‍್ಲಿ, ನಾನೂ ಸಿಎಂ ಆಗೇ ಆಗ್ತೀನಿ ನೀವು ನಂಗೆ ಬೆಂಬಲ ಕೊಡಿ ಎಂದು ಜನರಿಗೆ ಹೇಳಿದ್ದಾರೆ.

ಯಾವುದೇ ವಿಷಯಕ್ಕೂ ಭಯ ಬೀಳಬೇಡಿ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪಿಎಂ ಆಗೇ ಆಗುತ್ತಾರೆ ಎಂದಿದ್ದಾರೆ.

ರಾಜ್ಯದಲ್ಲಿ ಸಾಕಷ್ಟು ಜನ ನಾನೇ ಮುಂದೆ ಸಿಎಂ ಆಗೋದು ಅಂತ ಅಂಗಿ ಹೊಲ್ಸ್ಕೊಂಡು ಕೂತಿದಾರೆ. ಅವ್ರ್ ಮಗನ್ನ ಇವ್ರ್ ಗೆಲ್ಸ್ತಾರೆ, ಇವ್ರ್ ಮಗನ್ನ ಅವ್ರ್ ಗೆಲ್ಸ್ತಾರೆ. ಬರೀ ಅಡ್ಜಸ್ಟ್‌ಮೆಂಟ್ ಲೈಫ್ ಇವ್ರ್ದು. ನಾನ್ ಬಂದ್ಮೇಲೆ ಹಂಗೆಲ್ಲಾ ಆಗೋದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!