ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಪಂದ್ಯದಲ್ಲಿ ಅ.19ರಂದು ಭಾರತ- ಬಾಂಗ್ಲಾದೇಶ (Bangladesh) ತಂಡ ಮುಖಾಮುಖಿಯಾಗಲಿದ್ದು, ಈ ನಡುವೆ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ (Sehar Shinwari) ಅವರು ಆಫರ್ ಒಂದು ನೀಡಿದ್ದಾರೆ.
ಅದೇನೆಂದರೆ, ಭಾರತವನ್ನು ಸೋಲಿಸಿದರೆ ಬಾಂಗ್ಲಾ ಆಟಗಾರರ ಜೊತೆಗೆ ಡೇಟ್‌ಗೆ ಬರುತ್ತೇನೆ ಎಂದು ಡೇಟಿಂಗ್ ಆಫರ್ ನೀಡಿದ್ದಾರೆ.
ಈ ಕುರಿತ ಪೋಸ್ಟೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನನ್ನ ಬಂಗಾಳಿ ಸಹೋದರರು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುತ್ತಾರೆ. ಅವರ ತಂಡ ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ ನಾನು ಢಾಕಾಕ್ಕೆ ಹೋಗಿ ಬೆಂಗಾಲಿ ಹುಡುಗನೊಂದಿಗೆ ಫಿಶ್ ಡಿನ್ನರ್ ಡೇಟ್ ಮಾಡುತ್ತೇನೆ ಎಂದು ಬರೆದಿದ್ದಾರೆ.
ಸೆಹರ್ ಶಿನ್ವಾರಿ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ಬಾಂಗ್ಲಾ ಕ್ರಿಕೆಟಿಗರಿಗೆ ಪಾಕ್ ನಟಿ ಬೆಂಬಲಿಸಿದ್ದಾರೆ.