ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುವೆ: ಶೋಭಾ ಕರಂದ್ಲಾಜೆ

ಹೊಸದಿಗಂತ ವರದಿ, ಹಾವೇರಿ :

ವೈಯುಕ್ತಿಕ ಕಾರಣಗಳಿಗೆ ಟಿಕೆಟ್ ಬೇಡ ಅನ್ನುವವರಿಗೆ ಟಿಕೆಟ್ ಇಲ್ಲ. ಉಳಿದಂತೆ ಎಲ್ಲರಿಗೂ ಟಿಕೆಟ್ ಸಿಗುತ್ತದೆ. ನಾವೆಲ್ಲರೂ ಸ್ಪರ್ದೆ ಮಾಡಲಿದ್ದೇವೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಹಾವೇರಿ ಜಿಪಂ ಸಭಾಂಗಣದಲ್ಲಿ ಪಿಎಂ ಸೂರಜ್ ಪೋರ್ಟಲ್ ಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವು ಭಾಗದಲ್ಲಿ ಜಾತಿ ಸಮೀಕರಣದ ಕಾರಣದಿಂದಾಗಿ ಕೆಲವರಿಗೆ ಟಿಕೆಟ್ ಸಿಗಲಿಕ್ಕಿಲ್ಲ. ನನಗೆ ಗೊತ್ತಿಲ್ಲ, ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುವೆ. ಇಲ್ಲಾ ಅಂದ್ರೆ ಪಕ್ಷ ಸಂಘಟನೆ ಮಾಡುತ್ತೆನೆ ಎಂದರು.

ಉಡುಪಿ ಚಿಕ್ಕಮಗಳೂರಿನಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸ ಆಗಿದೆ. ಯೋಜನೆಗಳು ಆ ಕ್ಷೇತ್ರಕ್ಕೆ ಬಂದಿವೆ. ಅಲ್ಲಿ ಸಂಘಟನೆ ಮತ್ತು ಸಂಘ ಪರಿವಾರ ಉತ್ತಮ ನೆಲೆ ಹೊಂದಿದೆ. ಟಿಕೇಟ್ ಅಪೇಕ್ಷೆ ಇಲ್ಲದವರಿಗೆ ಮಾತ್ರ ಟಿಕೆಟ್ ಕೈ ತಪ್ಪುತ್ತೆ. ಯಾರು ನಿಂತರೂ ಗೆಲ್ಲಬಹುದು ಎಂಬ ವಾತಾವರಣ ಅಲ್ಲಿದೆ. ಟಿಕೆಟ್ ಕೊಟ್ಟರೆ ಸ್ವರ್ದೆ ಮಾಡುತ್ತೇನೆ. ಕೊಡದಿದ್ದರೆ ಪಕ್ಷದ ಕೆಲಸ ಮಾಡುವೆ ಎಂದು ಪುನರುಚ್ಚರಿಸಿದರು.

ಸಹಜವಾಗಿ ನಮ್ಮ ಕಾರ್ಯಕರ್ತರಿಗೆ ನಾನು ನಿಲ್ಲಬೇಕು ಅಂತ ಆಸೆ ಇರುತ್ತೆ. ಆದರೆ ಯಾರು ಅಂತ ಪಕ್ಷ ಗುರುತಿಸಿ ತೀರ್ಮಾನ ಮಾಡುತ್ತೆ. ನಾನು ಕಳೆದ ೩೦ ವರ್ಷಗಳಿಂದ ರಾಜಕಾರಣ ಮಾಡುತ್ತಾ ಬಂದಿದ್ದು ಹಲವು ಏಳು ಬೀಳುಗಳನ್ನು ಕಂಡವಳು. ಹೀಗಾಗಿ ಏನೆ ಆದರೂ ಪಕ್ಷ ಸೂಚಿಸಿದ ಕಾರ್ಯಕ್ಕೆ ಸಿದ್ದ ಎಂದರು.

ಈಶ್ವರಪ್ಪನವರು ಪಕ್ಷದ ಹಿರಿಯರು, ಅವರು ಪಕ್ಷದಲ್ಲಿ ಕೆಲಸ ಮಾಡ್ತಾರೆ ಏನೇ ಇದ್ದರೂ ನಮ್ಮ ವರಿಷ್ಠರು ಕರೆದು ಮಾತಾಡುತ್ತಾರೆ. ಅವರು ಶಿವಮೊಗ್ಗದಲ್ಲಿ ಸ್ಫರ್ದಿಸುತ್ತಾರೆ ಎಂಬುದು ಊಹಾಪೋಹ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!