ಮತ್ತೆ ಒಳ್ಳೆ ಸಿನಿಮಾ ಮಾಡ್ತೇನೆ, ಲೈಗರ್ ಸೋಲಿನ ಬಗ್ಗೆ ಮಾತನಾಡಿದ ದೇವರಕೊಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯ್ ದೇವರಕೊಂಡ ಲೈಗರ್ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದರು.
ಸಾವಿರ ಪ್ರಮೋಷನ್ಸ್ ನಂತರವೂ ಸಿನಿಮಾ ಸೋತಿದೆ, ಪ್ರೇಕ್ಷಕರು ಲೈಗರ್ ಇಷ್ಟಪಟ್ಟಿಲ್ಲ. ಬಾಕ್ಸ್‌ಆಫೀಸ್‌ನಲ್ಲಿ ಕಲೆಕ್ಷನ್ ಕೂಡ ಡಲ್ ಆಗಿದ್ದ ಕಾರಣ ದೇವರಕೊಂಡ ತಮ್ಮ ಸಭಾವನೆಯನ್ನೂ ನಿರ್ಮಾಪಕರಿಗೆ ವಾಪಾಸ್ ಮಾಡಿದ್ದರು.

ಇದೀಗ ಸಾರ್ವಜನಿಕವಾಗಿ ತಮ್ಮ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಬಹಳಷ್ಟು ನಿರೀಕ್ಷೆಯಿಂದ ಬಾಲಿವುಡ್‌ಗೆ ಎಂಟ್ರಿ ಕೊಟ್ಟೆ. ಆದರೆ ನಿರೀಕ್ಷೆಯಂತೆ ಸಿನಿಮಾ ಓಡಲಿಲ್ಲ. ಎಲ್ಲಾ ನಟರ ಜೀವನದಲ್ಲಿಯೂ ಒಳ್ಳೆ ದಿನಗಳು, ಕೆಟ್ಟ ದಿನಗಳು ಇದ್ದಿದ್ದೆ. ಏನೇ ಆಗಲಿ ಎದ್ದು ಹೊರಡಲೇಬೇಕು. ನಿಮ್ಮೆಲ್ಲರಿಗೆ ನಿರಾಸೆ ಮಾಡಿದ್ದೀನಿ, ಆದರೆ ಒಳ್ಳೆಯ ಸಿನಿಮಾ ಮೂಲಕ ಮತ್ತೆ ನಿಮ್ಮೆದುರು ಬರುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!