Sunday, December 4, 2022

Latest Posts

ಟ್ರೋಲ್‌ ಗಳಿಗೆ ಬೇಸತ್ತು ಟ್ವಿಟರ್‌ ತೊರೆದ ಕರಣ್‌ ಜೋಹರ್!‌

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಚಿತ್ರ ನಿರ್ಮಾಪಕ ಹಾಗೂ ಮನೋರಂಜನಾ ಕಾರ್ಯಕ್ರಮಗಳ ನಿರೂಪಕ ಕರಣ್ ಜೋಹರ್ ಟ್ವಿಟರ್‌ಗೆ ವಿದಾಯ ಘೋಷಿಸಿದ್ದಾರೆ.
ಕರಣ್ ಜೋಹರ್ ರದ್ದು ಬಾಲಿವುಡ್‌ ಸೆಲೆಬ್ರಿಟಿಗಳಲ್ಲಿ ಚಿತ್ತರಂಜಿತ ವ್ಯಕ್ತಿತ್ವ. ಅವರನ್ನು ಸಾಮಾನ್ಯವಾಗಿ ʼಸ್ವಜನಪಕ್ಷಪಾತಿʼ ಎಂದು ಕರೆಯಲಾಗುತ್ತದೆ. ಕರಣ್‌ ಬಾಲಿವುಡ್‌ ʼಸ್ಟಾರ್‌ ಕಿಡ್‌ʼ ಗಳಿಗೆ ಮಾತ್ರವೇ ಮಣೆಹಾಕುತ್ತಾರೆ. ಪ್ರತಿಭೆಯನ್ನೇ ನೆಚ್ಚಿಕೊಂಡಿರುವ ಯುವ ನಟ ನಟಿಯರನ್ನು ಯಾವುದೇ ರೀತಿಯಲ್ಲಿ ಬೆಂಬಲಿಸದೆ ತಾತ್ಸಾರ ಮಾಡುತ್ತಾರೆ ಎಂಬೆಲ್ಲ ಆರೋಪಗಳಿವೆ. ಜೊತೆಗೆ ಕರಣ್‌ ನಡೆಸಿಕೊಂಡುವ ಕಾಫಿ ವಿತ್‌ ಕಣ್‌ ಕಾರ್ಯಕ್ರಮ ತನ್ನ ʼಮುಚ್ಚುಮರೆಯಿಲ್ಲದ ಲೈಂಗಿಕ ವಿಚಾರಗಳʼ ಪ್ರಸ್ತುತಿಯಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಸಾಮಾಜಿಕ ತಾಣಗಳಲ್ಲಿ ಕರಣ್‌ ಕಾಲೆಳೆಯುವವರು ಜಾಸ್ತಿ. ತಮ್ಮ ವಿರುದ್ಧ ವಿಪರೀತವಾಗಿ ಹರಿದಾಡುವ ಟ್ರೋಲ್‌ ಗಳಿಂದ ಬೇಸತ್ತ ಕರಣ್‌ ಟ್ವಿಟರ್‌ ಖಾತೆಯನ್ನೇ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ. ಇಲ್ಲಿ ಮತ್ತೊಂದು ವಿಚಾರವೆಂದರೆ, ಕಣರ್‌ ಟ್ವಿಟರ್‌ ತೊರೆಯುತ್ತಿರುವ ವಿಚಾರವೂ ಟ್ರೋಲ್‌ ಆಗುತ್ತಿದೆ!.
ಇಂನ್ನು ಮುಂದೆ ʼಸಕಾರಾತ್ಮಕ ಶಕ್ತಿಗಳಿಗೆʼ ಜೀವನದಲ್ಲಿ ಹೆಚ್ಚಿನ ಜಾಗವನ್ನು ನೀಡಲು ಬಯಸಿದ್ದೇನೆ. ಆದ್ದರಿಂದ ಟ್ವಿಟರ್‌ ಗೆ ʼಗುಡ್‌ ಬೈʼ ಹೇಳಿತ್ತಿದ್ದೇನೆ ಎಂದು ಕರಣ್‌ ಜೋಹಾರ್‌ ತಮ್ಮ ತಮ್ಮ ಕೊನೆಯ ಟ್ವೀಟ್‌ನಲ್ಲಿ ಘೋಷಿಸಿದ್ದಾರೆ.
ಟ್ವಿಟರ್‌ ನಲ್ಲಿ 1.70 ಕೋಟಿ ಫಾಲೋವರ್‌ ಗಳನ್ನು ಹೊಂದಿದ್ದ ಕರಣ್‌ ನಡೆ ಅವರ ಅಭಿಮಾನಿಗಳಿಗೆ ನಿರಾಶೆ ತಂದಿದೆ. ಅದಾಗ್ಯೂ, ಕರಣ್ Instagram ನಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ತಿಂಗಳು, ಬ್ರಹ್ಮಾಸ್ತ್ರ ಚಿತ್ರದ ದೃಶ್ಯಗಳ ತರ್ಕವನ್ನು ಪ್ರಶ್ನಿಸಿದ ಟ್ರೋಲ್‌ಗೆ ಕರಣ್ ಜೋಹರ್ ಉತ್ತರಿಸಿ ಭಾರೀ ಟ್ರೋಲ್‌ ಆಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!