October 10, 2026
Saturday, October 10, 2026
spot_img

CINE | ಇಡೀ ಸಿನಿಮಾದಲ್ಲಿ ನಾನು ರಣ್‌ಬೀರ್‌ ಕಪೂರ್‌ ಎದುರಾಗೋದೇ ಇಲ್ಲ ಅಂದ್ರು ಯಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ಸಿನಿಮಾದಲ್ಲಿಯೇ ಅತಿ ದೊಡ್ಡ ಬಜೆಟ್‌ನ ಸಿನಿಮಾ ರಾಮಾಯಣ. ಈ ಸಿನಿಮಾದಲ್ಲಿ ಕನ್ನಡದ ನಟ ಯಶ್‌ ಹಾಗೂ ಬಾಲಿವುಡ್‌ ನಟ ರಣ್‌ಬೀರ್‌ ಕಪೂರ್‌ ಎದುರುಬದುರಾಗಲಿದ್ದಾರೆ.

ಈ ಬಗ್ಗೆ ಯಶ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನಾನು ರಣ್‌ಬೀರ್‌ ಎದುರು ಬದುರು ಆಗೋದೇ ಇಲ್ಲ. ಎಲ್ಲರಿಗೂ ಗೊತ್ತಿರೋ ಹಾಗೆ ಇದು ಫಸ್ಟ್‌ ಪಾರ್ಟ್‌. ಇದರಲ್ಲಿ ನಮ್ಮ ನಮ್ಮ ಸಾಮ್ರಾಜ್ಯದಲ್ಲಿ ನಾವು ಇರುತ್ತೀವಿ.

ಸೆಟ್‌ನಲ್ಲಿ ಸಿಕ್ಕಾಗ ಇಬ್ಬರೂ ಸಿನಿಮಾ ಬಗ್ಗೆ ಮಾತನಾಡ್ತೇವೆ. ಅವರು ಅತ್ಯುತ್ತಮ ಕಲಾವಿದ. ಈ ಸಿನಿಮಾಗಾಗಿ ಇಬ್ಬರೂ ಕೆಲಸ ಮಾಡ್ತಿದ್ದೇವೆ. ರಾಮಾಯಣ ಯಶ್‌ ಸಿನಿಮಾ ಅಲ್ಲ, ರಣ್‌ಬೀರ್‌ ಸಿನಿಮಾ ಅಲ್ಲ. ರಾಮಾಯಣ ಅಂದ್ರೆ ರಾಮಾಯಣವೇ. ಅದೇ ಹೀರೋ ಆಗ್ಬೇಕು. ನಮ್ಮ ಕೆಮಿಸ್ಟ್ರಿ ಹೇಗಿದ್ಯೋ ಅಂತ ಡಿಸೈಡ್‌ ಮಾಡೋದು ಜನರು. ನಾವಂತು ಪ್ರತಿ ದಿನವನ್ನು ಎಂಜಾಯ್‌ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.

Must Read