ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಚುರುಕೊಂಡಿದೆ. ಈ ಮಧ್ಯೆ ರೇಣುಕಾಸ್ವಾಮಿ ಪತ್ನಿ ಸಹನಾ ನ್ಯಾಯಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದಾರೆ.
ಸುಮ್ಮನೆ ಕೂರೋದಿಲ್ಲ, ನ್ಯಾಯ ಸಿಗುವವರೆಗೂ ಹೋರಾಟ ಮಾಡ್ತೇನೆ, ನನ್ನ ಪತಿಯ ಸಾವು ನನಗೆ ಆಘಾತವನ್ನುಂಟು ಮಾಡಿದೆ. ನಾನು ಈಗ 5 ತಿಂಗಳ ಗರ್ಭಿಣಿ, ನನಗೆ ಹುಟ್ಟುವ ಮಗುವನ್ನು ಯಾರು ನೋಡಿಕೊಳ್ಳುತ್ತಾರೆ, ನನಗೆ ಹುಟ್ಟಿದ ಮಗುವಿಗೆ ತಂದೆ ಯಾರು ಎಂದು ಕೇಳಿದರೆ ಯಾರನ್ನು ನಾನು ತೋರಿಸಬೇಕು ಎಂದು ಕಣ್ಣೀರಿಟ್ಟಿದ್ದಾರೆ.
ನನ್ನ ಪತಿ ಅಂತರ್ಮುಖಿಯಾಗಿದ್ದು, ಬೇರೆಯವರ ವಿಷಯಕ್ಕೆ, ತಂಟೆಗೆ ಅವರು ಹೋದವರಲ್ಲ, ಕೊಲ್ಲುವಂಥದ್ದು ಏನೂ ಆಗಿರಲಿಲ್ಲ. ಸೆಲೆಬ್ರಿಟಿ ಎಂದು ಸುಮ್ಮನೆ ಕೂರುವುದಿಲ್ಲ. ನ್ಯಾಯದ ಮೇಲೆ ನಂಬಿಕೆ ಇದೆ. ನನ್ನ ಪತಿ ಆತ್ಮಕ್ಕೆ ಶಾಂತಿ ಸಿಗಬೇಕು, ಕೊಂದವರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ.