ನಾನು ಚುನಾವಣೆಗೆ ನಿಲ್ಲುವುದಿಲ್ಲ, ಮಗ ಶರತ್ ನನ್ನು ಗೆಲ್ಲಿಸಿ: ಬಚ್ಚೇಗೌಡ ಮನವಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮಗ ಶರತ್ ಬಚ್ಚೇಗೌಡರನ್ನು ಗೆಲ್ಲಿಸಿ ಎಂದು ಬಿಜೆಪಿ ಸಂಸದ ಬಿ.ಎನ್‌.ಬಚ್ಚೇಗೌಡ ಹೊಸಕೋಟೆಯ ಜನರಲ್ಲಿ‌ ಮನವಿ ಮಾಡಿದರು.

ಹೊಸಕೋಟೆ ತಾಲೂಕಿನ ನಡುವಿನಪುರ ಗ್ರಾಮದಲ್ಲಿ ಪುನೀತ್ ರಾಜ್​ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನನ್ನ ಮಗ ಶಾಸಕನಾಗಿದ್ದುಕೊಂಡು ತಾಲೂಕಿನಲ್ಲಿ ಒಳ್ಳೆಯ ಸಂಘಟನೆ ಮಾಡಿದ್ದಾನೆ. ಅವನ ಮೇಲೆ ನಿಮ್ಮ ಕೃಪೆ ಇರಲಿ. ಇನ್ನು ಮುಂದೆ ನಾನು ಯಾವ ಚುನಾವಣೆಯಲ್ಲೂ ನಿಲ್ಲುವುದಿಲ್ಲ. ಇದೀಗ ಸಂಸದನಾಗಿ ನಾನು ಚುನಾವಣಾ ನಿವೃತ್ತಿ ಪಡೆಯುತ್ತೇನೆ. ಆದರೆ ನಿಮ್ಮ ಮಧ್ಯದಲ್ಲೇ ಇದ್ದು, ತಾಲೂಕಿನ ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಬಚ್ಚೇಗೌಡ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!