ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕೋವಿಡ್ ಲಸಿಕಾಭಿಯಾನ ಇಂದಿಗೆ ಒಂದು ವರ್ಷ ಪೂರೈಸಿದೆ. ಇದು ಭಾರತ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ಕೇಂದ್ರ ಸರ್ಕಾರ ಸಂತಸ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಲಸಿಕೀಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಲಸಿಕೆ ಕಾರ್ಯಕ್ರಮವು ಕೊರೋನಾ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಶಕ್ತಿ ನೀಡಿದೆ. ಇದು ಜೀವ ಉಳಿಸಲು ಮತ್ತು ಜೀವನೋಪಾಯವನ್ನು ರಕ್ಷಿಸಲು ಕಾರಣವಾಗಿದೆ ಎಂದಿದ್ದಾರೆ.
Today we mark #1YearOfVaccineDrive.
I salute each and every individual who is associated with the vaccination drive.
Our vaccination programme has added great strength to the fight against COVID-19. It has led to saving lives and thus protecting livelihoods. https://t.co/7ch0CAarIf
— Narendra Modi (@narendramodi) January 16, 2022
ಲಸಿಕೀಕರಣದ ಮುಖ್ಯಾಂಶಗಳು:
- ದೇಶದಲ್ಲಿ 156.76 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ.
- ಭಾರತದಲ್ಲೇ ತಯಾರಾದ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ.
- ಶೇ.92ಕ್ಕಿಂತ ಹೆಚ್ಚು ಜನ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ.
- ಶೇ.68ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.
- ಕೇವಲ 9 ತಿಂಗಳಲ್ಲಿ 100 ಕೋಟಿ ಡೋಸ್ ನೀಡಿದ ಹೆಮ್ಮೆ.
- ಒಂದೇ ದಿನ 2.51 ಕೋಟಿ ಡೋಸ್ ನೀಡಿದ ಹೆಗ್ಗಳಿಕೆ.
- 15 ದಿನಗಳಲ್ಲಿ 3.51 ಕೋಟಿ ಮಕ್ಕಳಿಗೆ ಲಸಿಕೆ.
- 43.19 ಲಕ್ಷ ಮಂದಿಗೆ ಬೂಸ್ಟರ್ ಡೋಸ್.
- 6 ಲಕ್ಷ ಕೈದಿಗಳಿಗೆ ಲಸಿಕೆ ನೀಡಿದ ಭಾರತ.
- 76 ಕೋಟಿ ಮಹಿಳೆಯರಿಗೆ ಲಸಿಕೆ.
- ಐ ಡ್ರೋನ್ ಮೂಲಕ ದೂರದ ಪ್ರದೇಶಗಳಿಗೆ ಲಸಿಕೆ ವಿತರಣೆ.
- ಬುಡಕಟ್ಟು ಪ್ರದೇಶಗಳಿಗೆ 11 ಕೋಟಿ ಡೋಸ್ ಲಸಿಕೆ.
- ಆರೋಗ್ಯ ಸೇತು ಆಪ್ ಮೂಲಕ ಲಸಿಕೆ ಪಡೆದವರಿಗೆ ಆನ್ ಲೈನ್ ಪ್ರಮಾಣ ಪತ್ರ ನೀಡುವ ಮೂಲಕ ಭಾರತದ ಲಸಿಕೆ ಅಭಿಯಾನ ಯಶಸ್ವಿಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.