ಮಂಗಳಮುಖಿ ಪದವನ್ನು ಗೇಲಿಗೆ ಉಪಯೋಗಿಸಿದ ಇಬ್ರಾಹಿಂ: ಮಂಜಮ್ಮ ಜೋಗತಿ ಖಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸರ್ಕಾರವನ್ನು ಟೀಕಿಸುವ ಭರದಲ್ಲಿ ಜೆಡಿಎಸ್‌ ನ ಸಿಎಂ ಇಬ್ರಾಹಿಂ ಮಂಗಳಮುಖಿ ಪದವನ್ನು ಗೇಲಿ ಮಾಡಲು ಬಳಸಿರುವುದು ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಸರ್ಕಾರವನ್ನು ಬೈಯುವ ಭರದಲ್ಲಿ ಇಬ್ರಾಹಿಂ “ಮೊದಲು ಈ ಮಂಗಳಮುಖಿ ಸರ್ಕಾರವನ್ನು ಕಿತ್ತೊಯಬೇಕು. ಈ ಸರ್ಕಾರದೊಂದಿಗೆ ಜಗಳವಾಡಲೂ ಸಾಧ್ಯವಾಗುವುದಿಲ್ಲ, ಇದು ಗಂಡಸೂ ಅಲ್ಲದ ಹೆಂಗಸೂ ಅಲ್ಲದ ಮಂಗಳಮುಖಿ ಸರ್ಕಾರ. ಏನಾದರೂ ಕೇಳಲು ಹೋದರೆ ಕೈ ತಟ್ಟಿ ನಗುತ್ತಾರೆ. ಆದ್ದರಿಂದ ನಾವು ಹಿಂದೆ ಸರಿಯಬೇಕಾಗುತ್ತದೆ” ಎಂದು ಮಂಗಳಮುಖಿ ಪದವನ್ನು ಗೇಲಿ ಮಾಡಲು ಬಳಸಿದ್ದಾರೆ.

ಇದನ್ನು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಂಜಮ್ಮ ಜೋಗತಿ ಖಂಡಿಸಿದ್ದಾರೆ. ಈ ಕುರಿತು ಟ್ವಿಟ್‌ ಮಾಡಿರುವ ಅವರು “ನಮ್ಮ ತಂದೆ ಕೂಡ ಹೀಗೆ ಗಂಡಸಾದರೆ ಕೆಲಸ ಕೊಡಿಸುತ್ತಿದ್ದೆ, ಹೆಂಗಸಾದರೆ ಮದುವೆ ಮಾಡುತ್ತಿದ್ದೆ ಹೇಳುತ್ತಿದ್ದರು. ನಾನೂ ಕೂಡ ಮಂಗಳಮುಖಿ. ನಾನೊಬ್ಬ ಕಲಾವಿದೆ, ಕನ್ನಡತಿ. ಸಮಾಜ ನಮಗೆ ಗೌರವ ನೀಡುತ್ತದೆ. ನೀವು ಹೀಗೆ ಅವಮಾನ ಮಾಡಬಾರದಿತ್ತು. ರಾಜಕೀಯ ಮಾಡಲು ಹೋಗಿ ಈಗ ನೀವೂ ಕೂಡ ಕೈತಟ್ಟುವಂತಾಯಿತು” ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!