ಐಸಿಸಿ ನೂತನ T20 Ranking: ಬ್ಯಾಟಿಂಗ್ ನಲ್ಲಿ ಸೂರ್ಯಕುಮಾರ್​ ಯಾದವ್​ ನಂ.1!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಸಿಸಿ ನೂತನ T20 Ranking ಟೀಮ್​ ಇಂಡಿಯಾದ ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ನಂ.1 ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.906 ರೇಟಿಂಗ್‌ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನದ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಮೊಹಮ್ಮದ್‌ ರಿಜ್ವಾನ್‌ (811 ರೇಟಿಂಗ್‌ ಪಾಯಿಂಟ್ಸ್‌) ಮತ್ತು ಬಾಬರ್ ಅಜಂ (755) ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ಏಡೆನ್ ಮಾರ್ಕ್ರಮ್(748) ಹಾಗೂ ಕಿವೀಸ್​ನ ಎಡಗೈ ಬ್ಯಾಟರ್​ ಡೆವೊನ್‌ ಕಾನ್ವೆ (745) ಆ ಬಳಿಕದ ಸ್ಥಾನದಲ್ಲಿದ್ದಾರೆ.
ವಿರಾಟ್‌ ಕೊಹ್ಲಿ 15ನೇ ಸ್ಥಾನ ಪಡೆದಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಅಫಘಾನಿಸ್ತಾನದ ಸ್ಪಿನ್ನರ್​ ರಶೀದ್‌ ಖಾನ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಫಜಲ್‌ಹಕ್‌ ಫರೂಕಿ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಜೋಶ್‌ ಹ್ಯಾಜಲ್​ವುಡ್​ ಮೂರನೇ, ಶ್ರೀಲಂಕಾದ ವನಿಂದು ಹಸರಂಗ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಯಾವುದೇ ಬೌಲರ್‌ ಅಗ್ರ 10 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!