ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಟಿ20 ನೂತನ ಶ್ರೇಯಾಂಕ್ ದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಟಿ20 ಶ್ರೇಯಾಂಕದಲ್ಲಿ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ ಮೊದಲನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಟೀಂ ಇಂಡಿಯಾದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಕೂಡ ಉತ್ತಮ ಏರಿಕೆ ಕಂಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ರವಿ ಬಿಷ್ಣೋಯ್ ಚೇತರಿಕೆ ಕಂಡಿದ್ದು, ಸದ್ಯ 44ನೇ ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ ಆವೇಶ್ ಖಾನ್, ಅಕ್ಸರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ಕೂಡ ಚೇತರಿಕೆ ಕಂಡಿದ್ದಾರೆ.
ಬಾಬರ್ ಆಜಂ(ಪಾಕಿಸ್ತಾನ) 818 ಪಾಯಿಂಟ್
ಸೂರ್ಯಕುಮಾರ್ ಯಾದವ್(ಇಂಡಿಯಾ) 805 ಪಾಯಿಂಟ್
ಮೊಹಮ್ಮದ್ ರಿಜ್ವಾನ್(ಪಾಕಿಸ್ತಾನ) 794 ಪಾಯಿಂಟ್
ಮರ್ಕ್ರಾಮ್(ದಕ್ಷಿಣ ಆಫ್ರಿಕಾ) 792 ಪಾಯಿಂಟ್
ಡೇವಿಡ್ ಮಲನ್(ಇಂಗ್ಲೆಂಡ್) 731 ಪಾಯಿಂಟ್
ಆರನ್ ಫಿಂಚ್(ಆಸ್ಟ್ರೇಲಿಯಾ) 716 ಪಾಯಿಂಟ್
ನಿಶಾಂಕ್(ಶ್ರೀಲಂಕಾ) 661 ಪಾಯಿಂಟ್
ಕಾನ್ವೆ(ನ್ಯೂಜಿಲ್ಯಾಂಡ್) 655 ಪಾಯಿಂಟ್
ನಿಕೂಲಸ್ ಪೂರನ್(ವೆಸ್ಟ್ ಇಂಡೀಸ್)644 ಪಾಯಿಂಟ್
ಮಾರ್ಟಿನ್ ಗಪ್ಟಿಲ್(ನ್ಯೂಜಿಲ್ಯಾಂಡ್) 638 ಪಾಯಿಂಟ್