March 27, 2026
Friday, March 27, 2026
spot_img

ICC T20 World Cup | ನಾವು ಇನ್ನೂ ರೇಸ್‌ನಲ್ಲಿದ್ದೇವೆ: ಸಲ್ಮಾನ್ ಅಲಿ ಅಘಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಸೂಪರ್-8 ಹಂತದಲ್ಲಿ ಗ್ರೂಪ್-2ರಿಂದ ಇಂಗ್ಲೆಂಡ್ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದಿದ್ದು, ಉಳಿದಿರುವ ಒಂದು ಸ್ಥಾನಕ್ಕಾಗಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವೆ ಕಠಿಣ ಪೈಪೋಟಿ ಮುಂದುವರಿದಿದೆ.

ಪಾಕಿಸ್ತಾನ್ ತಂಡದ ಭವಿಷ್ಯ ಇಂಗ್ಲೆಂಡ್ ವಿರುದ್ಧದ ನ್ಯೂಝಿಲೆಂಡ್ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಇಂಗ್ಲೆಂಡ್ ನ್ಯೂಝಿಲೆಂಡ್ ಅನ್ನು ಸೋಲಿಸಿದರೆ ಮಾತ್ರ ಪಾಕಿಸ್ತಾನ್‌ಗೆ ಅವಕಾಶ ಉಳಿಯುತ್ತದೆ. ಆ ಬಳಿಕ ಪಾಕಿಸ್ತಾನ್ ಶ್ರೀಲಂಕಾವನ್ನು ಸೋಲಿಸಬೇಕು. ಆದರೆ ಕೇವಲ ಗೆಲುವು ಸಾಕಾಗದು; ನೆಟ್ ರನ್ ರೇಟ್‌ನಲ್ಲಿ ಭಾರೀ ಸುಧಾರಣೆ ಅಗತ್ಯ.

ಇದನ್ನೂ ಓದಿ:

ಪ್ರಸ್ತುತ ನ್ಯೂಝಿಲೆಂಡ್ ಉತ್ತಮ ರನ್‌ರೇಟ್ ಹೊಂದಿರುವುದರಿಂದ, ಪಾಕ್ ತಂಡವು 70-80 ರನ್ ಅಂತರದ ಜಯ ಸಾಧಿಸಬೇಕಾಗಬಹುದು ಎನ್ನಲಾಗುತ್ತಿದೆ. ಇಂಗ್ಲೆಂಡ್ 40 ರನ್ ಅಂತರದಲ್ಲಿ ಗೆದ್ದರೆ, ಪಾಕಿಸ್ತಾನ್ ಕನಿಷ್ಠ 30 ರನ್‌ಗಳ ಭರ್ಜರಿ ಗೆಲುವು ದಾಖಲಿಸಬೇಕು ಎಂಬ ಲೆಕ್ಕಾಚಾರ ಇದೆ.

ತಂಡದ ನಾಯಕ ಸಲ್ಮಾನ್ ಅಲಿ ಅಘಾ, “ನಾವು ಇನ್ನೂ ರೇಸ್‌ನಲ್ಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೊಂದು ತಂಡದ ಫಲಿತಾಂಶದ ಮೇಲೆ ಅವಲಂಬಿಸಿರುವ ಪಾಕಿಸ್ತಾನ್ ಈಗಲೇ ಫೈನಲ್ ಕನಸು ಕಾಣುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !