ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಮಿಥಾಲಿ ರಾಜ್ ಅವರು ಐಸಿಸಿ ಓಡಿಐ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಮಿಥಾಲಿ 36 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದ್ದರಿಂದ ಅವರ ಸ್ಥಾನ ನಾಲ್ಕಕ್ಕೆ ಕುಸಿದಿದೆ.
ಏಕದಿನ ಪಂದ್ಯಗಳ ರ‍್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ ಇದ್ದು, ಮೆಗ್ ಲ್ಯಾನಿಂಗ್ 2ನೇ ಸ್ಥಾನಕ್ಕೆ ಏರಿದ್ದಾರೆ. ಇನ್ನು ಮೊದಲ ಸ್ಥಾನಕ್ಕೆ ಏರಲು ಮೆಗ್ ಅವರಿಗೆ ಕೇವಲ 15 ಅಂಕಗಳು ಬೇಕಾಗಿದೆ.
ರಾಚೆಲ್ ಹೇನ್ಸ್ ಕೂಡ ತಮ್ಮ ಅದ್ಭುತ ಆಟದ ಮೂಲಕ ಟಾಪ್ 7ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ನ ನ್ಯಾಟ್ ಸ್ಕಿವರ್ 6ನೇ ಸ್ಥಾನ ಪಡೆದಿದ್ದಾರೆ.