ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ಸ್ಫೋಟದ ಪರಿಣಾಮ: ಊರು ಬಿಟ್ಟ 500 ನಿವಾಸಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಂಟ್ರಲ್ ಅಮೆರಿಕದಲ್ಲಿ 2018ರಲ್ಲಿ ಸಂಭವಿಸಿದ ಭೀಕರ ಜ್ವಾಲಾಮುಖಿ ಸ್ಫೋಟದ ಪರಿಣಾಮ ಇದೀಗ ಕಾಣಿಸಿದೆ.

ಗ್ವಾಟೆಮಾಲಾದ ಧ್ವಂಸಗೊಂಡ ಪ್ರದೇಶದ ಕಡೆಗೆ ಕೆಂಪು ಬಿಸಿ ಕಲ್ಲು, ಬೂದಿ ಇಳಿಜಾರುಗಳಲ್ಲಿ ಹರಿಯಲು ಆರಂಭಿಸಿದೆ. ಈ ಕಾರಣದಿಂದ ಈಗಾಗಲೇ 500 ಕ್ಕೂ ಹೆಚ್ಚು ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ.

ನಿನ್ನೆಯಿಂದ ಬೂದಿ ಹಾಗೂ ಕೆಂಪು ಬಿಸಿ ಕಲ್ಲು ಸರಿಯಲು ಆರಂಭಿಸಿದೆ ಎಂದು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಸಿಸ್ಮಾಲಜಿ ಮಾಹಿತಿ ನೀಡಿದೆ. ಜ್ವಾಲಾಮುಖಿ ಸ್ಫೋಟದ ಹಿನ್ನೆಲೆ ಜನ ಸ್ಥಳಾಂತರಗೊಳ್ಳಲು ಆರಂಭಿಸಿದ್ದು, ಎಸ್ಕುಯಿಂಟ್ಲಾದಲ್ಲಿ ಆಶ್ರಯ ಪಡೆದಿದ್ದಾರೆ. ಜಿಮ್‌ವೊಂದನ್ನು ಆಶ್ರಯ ತಾಣವನ್ನಾಗಿ ಪರಿವರ್ತಿಸಲಾಗಿದ್ದು, ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!