June 18, 2026
Thursday, June 18, 2026
spot_img

Ice Candy | ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ ತಿಂದು ದೇಹ ತಂಪು ಮಾಡ್ಕೊಳಿ

ಬೇಸಿಗೆಯ ಉರಿ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ ಒಂದು ಅತ್ಯುತ್ತಮ ಆಯ್ಕೆ. ಇದು ಆರೋಗ್ಯಕರ, ರಿಫ್ರೆಶಿಂಗ್ ಆಗಿದ್ದು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು:

ಕಲ್ಲಂಗಡಿ ಹಣ್ಣು-1 ಕಪ್
ಸಕ್ಕರೆ ಅಥವಾ ಜೇನುತುಪ್ಪ
ನಿಂಬೆ ರಸ (1 ಚಮಚ)
ಉಪ್ಪು ಅಥವಾ ಕಪ್ಪು ಉಪ್ಪು -ಒಂದು ಚಿಟಿಕೆ
ಚಾಟ್ ಮಸಾಲಾ
ಪುದೀನಾ ಎಲೆಗಳು

ಮಾಡುವ ವಿಧಾನ:

ಮೊದಲು ಬೀಜರಹಿತ ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ಮಿಕ್ಸಿಗೆ ಹಾಕಿ ನೀರು ಸೇರಿಸದೇ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಈ ರಸಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಜೇನುತುಪ್ಪ, ಒಂದು ಚಮಚ ನಿಂಬೆ ರಸ, ಒಂದು ಚಿಟಿಕೆ ಉಪ್ಪು ಹಾಗೂ ಬೇಕಾದರೆ ಅರ್ಧ ಚಮಚ ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಇದಕ್ಕೆ ಪುದೀನಾ ಎಲೆಗಳನ್ನು ಸೇರಿಸಿದರೆ ಇನ್ನಷ್ಟು ತಾಜಾ ರುಚಿ ಸಿಗುತ್ತದೆ. ನಂತರ ಈ ಮಿಶ್ರಣವನ್ನು ಐಸ್ ಕ್ಯಾಂಡಿ ಮೋಲ್ಡ್‌ಗಳಲ್ಲಿ ಸುರಿದು ಸ್ಟಿಕ್ ಹಾಕಿ ಫ್ರೀಜರ್‌ನಲ್ಲಿ 8 ರಿಂದ 10 ಗಂಟೆಗಳ ಕಾಲ ಇರಿಸಿ.

ಕ್ಯಾಂಡಿ ಗಟ್ಟಿಯಾದ ನಂತರ ಮೋಲ್ಡ್ ಅನ್ನು ಸ್ವಲ್ಪ ಬಿಸಿ ನೀರಿನಲ್ಲಿ ಅದ್ದಿ ನಿಧಾನವಾಗಿ ಹೊರತೆಗೆದು ಸವಿಯಿರಿ. ಈ ಕಲ್ಲಂಗಡಿ ಐಸ್ ಕ್ಯಾಂಡಿ ದೇಹವನ್ನು ತಂಪಾಗಿಡುವುದರ ಜೊತೆಗೆ ಬೇಸಿಗೆಯ ದಣಿವನ್ನು ಕೂಡ ಕಡಿಮೆ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !