ICE CREAM |Curd ಐಸ್ ಕ್ರೀಮ್ ಎಂದಾದರೂ ಟೇಸ್ಟ್ ಮಾಡಿದ್ದೀರಾ? ಇಲ್ಲಿದೆ ಟೇಸ್ಟಿ ಐಸ್ ಕ್ರೀಮ್ ರೆಸಿಪಿ

ಬೇಸಿಗೆಯಲ್ಲಿ ಐಸ್ ಕ್ರೀಮ್, ತಂಪು ಪಾನೀಯಗಳು ಮತ್ತು ಮೊಸರು ಬೇಡ ಎಂದು ಯಾರು ಹೇಳಬಹುದು? ತಣ್ಣನೆಯ ಐಸ್ ಕ್ರೀಂನಂತೆ ಮೊಸರು ಎಲ್ಲರಿಗೂ ಇಷ್ಟವಾಗುತ್ತದೆ. ನೀವು ಮೊಸರಿನಲ್ಲೇ ಐಸ್ ಕ್ರೀಮ್ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಮೊಸರಿನ ಐಸ್ ಕ್ರೀಮ್ ತಿನ್ನುವ ಮೂಲಕ ನಿಮ್ಮ ಬಾಯಿ ಮತ್ತು ದೇಹವನ್ನು ತಂಪಾಗಿಸಿ.

ಐಸ್ ಕ್ರೀಂ ಮಾಡಲು ಬೇಕಾಗುವ ಪದಾರ್ಥ:
ಅರ್ಧ ಕಪ್ ಮೊಸರು
ಕಾಲು ಕಪ್ ಸಕ್ಕರೆ
ಅರ್ಧ ಕಪ್ ಕ್ರೀಂ
2-3 ಹನಿ ವೆನಿಲಾ ಎಸೆನ್ಸ್
10-12 ಕತ್ತರಿಸಿದ ಗೋಡಂಬಿ

ಐಸ್ ಕ್ರೀಂ ಮಾಡುವ ವಿಧಾನ:

ಮೊದಲು ಒಂದು ಪಾತ್ರೆಗೆ ಮೊಸರು ಹಾಗೂ ಸಕ್ಕರೆಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಇದಕ್ಕೆ ಫ್ರೆಶ್ ಕ್ರೀಂ ಹಾಗೂ ವೆನಿಲಾ ಎಸೆನ್ಸ್ ಹಾಕಿ ಮತ್ತೆ ಮಿಕ್ಸ್ ಮಾಡಿ. ಮಿಶ್ರಣ ಸ್ವಲ್ಪ ಗಟ್ಟಿಯಾದ ಮೇಲೆ ಇದಕ್ಕೆ ಗೋಡಂಬಿ ಹಾಕಿ ಒಂದು ಡಬ್ಬದಲ್ಲಿ ಮಿಶ್ರಣವನ್ನು ಹಾಕಿ ಫ್ರೀಜರ್ ನಲ್ಲಿಡಿ. ಸುಮಾರು 5-6 ಗಂಟೆಯವರೆಗೆ ಫ್ರೀಜರ್ ನಲ್ಲಿಡಿ. ಅದು ಗಟ್ಟಿಯಾದ ನಂತರ ರುಚಿರುಚಿ ಐಸ್ ಕ್ರೀಂ ತಿನ್ನಲು ಸಿದ್ದ.

ನಿಮಗಿಷ್ಟವಾಗುವ ಪ್ಲೇವರ್ ನಲ್ಲಿ ನೀವು ಮೊಸರಿನ ಐಸ್ ಕ್ರೀಂ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!