ALERT | 17 ಡಯಟರಿ ಗೈಡ್‌ಲೈನ್ಸ್‌ ರಿಲೀಸ್‌ ಮಾಡಿದ ಐಸಿಎಂಆರ್‌, ಉಪ್ಪು-ಸಕ್ಕರೆ ಇಂದ ದೂರ ಇರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದಲ್ಲಿ ಏಕಾಏಕಿ ಅನಾರೋಗ್ಯ ಹೆಚ್ಚಾಗಿದೆ. ಎಲ್ಲ ಕಾಯಿಲೆಗಳಿಗೂ ಮೂಲ ಕಾರಣ ಆಹಾರ. ಹೌದು, ಆಹಾರ ಪದ್ಧತಿಯಿಂದಲೇ ಎಲ್ಲ ಆರಂಭವಾಗುತ್ತದೆ. ಈ ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಶಿಯನ್ ಸಂಶೋಧನೆ ಮಾಡಿದೆ.

ಭಾರತೀಯರಿಗೆ ಹೊಸ ಆಹಾರ ಮಾರ್ಗಸೂಚಿಯನ್ನು ಬಿಡುಗಡೆಮಾಡಿದೆ. ಅದರಲ್ಲಿ ಸಕ್ಕರೆ ಮತ್ತು ಉಪ್ಪನ್ನು ಕಡಿಮೆ ಬಳಸಬೇಕು ಎಂದು ತಿಳಿಸಿವೆ.

ಭಾರತೀಯರಲ್ಲಿ ಅಧಿಕ ಪ್ರಮಾಣದಲ್ಲಿ ಸ್ಥೂಲಕಾಯ, ಮಧುಮೇಹ, ಹೃದಯ ಕಾಯಿಲೆ ಸಂಬಂಧಿಸಿದ ಹಲವು ರೋಗಗಳನ್ನು ನಿಯಂತ್ರಿಸುವ ಗುರಿಹೊಂದಿದೆ. ಭಾರತೀಯರು ದಿನಕ್ಕೆ 20-25 ಗ್ರಾಂ ಸಕ್ಕರೆ ತಿನ್ನಬೇಕು ಎಂದು ತಿಳಿಸಿದೆ.

ಅಪೆಕ್ಸ್ ಹೆಲ್ತ್ ರಿಸರ್ಚ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷಿಯನ್ ಪ್ರಕಾರ ಬಾರತದಲ್ಲಿಆಹಾರ ಪದ್ಧತಿಯಿಂದ ಅನಾರೋಗ್ಯ ಹೆಚ್ಚಾಗಿದೆ ಎಂದು ತಿಳಿಸಿದೆ. ಈ ಮಾರ್ಗಸೂಚಿಯಿಂದ ಅಪೌಷ್ಠಿಕತೆ ವಿರುದ್ಧ ಹೋರಾಡಿ ಆರೋಗ್ಯ ಜೀವನ ನಡೆಸುವ ಗುರಿಹೊಂದಿದೆ.

1 ಬ್ಯಾಲೆನ್ಸ್‌ ಆದ ಆಹಾರಕ್ಕೆ ಆದ್ಯತೆ ನೀಡಿ.
2 ಪ್ರೆಗ್ನೆನ್ಸಿ ಅಥವಾ ಹಾಲುಣಿಸುವ ತಾಯಂದಿರು ಹೆಚ್ಚು ಆಹಾರ ತಿನ್ನಿ
3 ಮಗು ಹುಟ್ಟಿದ ಮೊದಲ ಆರು ತಿಂಗಳು ಎದೆಹಾಲನ್ನು ಮಾತ್ರ ನೀಡಿ. ಎರಡು ವರ್ಷದವರೆಗೂ ಹಾಲುಣಿಸಿ.
4 ಆರು ತಿಂಗಳಿಗಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಮನೆಯ ಆಹಾರವನ್ನೇ ನೀಡಿ
5 ಮಕ್ಕಳಿಗೆ ಹೊರಗಿನ ಆಹಾರದ ಬದಲು, ಮನೆಯ ಆಹಾರವನ್ನೇ ನೀಡಿ.
6 ಕಾಳು ಬೇಳೆ-ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ
7 ಎಣ್ಣೆ ಬಳಕೆ ಮೇಲೆ ಹಿಡಿತ ಇರಲಿ
8 ಮಸಲ್‌ ಮಾಸ್‌ ಹೆಚ್ಚು ಮಾಡುವಂಥ ಆಹಾರ ಸೇವಿಸಿ
9 ಹೆಚ್ಚು ತೂಕ ಇದ್ದರೆ ಇಳಿಸಿ, ಆರೋಗ್ಯಕರ ಡಯಟ್‌ ಇಂದೇ ಆರಂಭಿಸಿ
10 ಫಿಸಿಕಲಿ ಸದಾ ಆಕ್ಟೀವ್‌ ಆಗಿರಿ
11 ಉಪ್ಪು ಸೇವನೆ ಕಡಿಮೆ ಮಾಡಿ
12 ರಸ್ತೆ ಬದಿಯ ಆಹಾರಗಳಿಗೆ ಗುಡ್‌ಬೈ ಹೇಳಿ
13 ಆಹಾರ ಬೇಯಿಸುವ ವಿಧಾನದ ಬಗ್ಗೆ ಗಮನ ಇರಲಿ
14 ಹೆಚ್ಚು ನೀರು ಕುಡಿಯಿರಿ
15 ಹೈ ಫ್ಯಾಟ್‌, ಸಕ್ಕರೆ , ಪ್ರೊಸೆಸ್ಡ್‌ ಆಹಾರ ತಿನ್ನಬೇಡಿ
16 ನ್ಯೂಟ್ರಿಯಂಟ್ಸ್‌ ತುಂಬಿರುವ ಆಹಾರಕ್ಕೆ ಆದ್ಯತೆ ನೀಡಿ.
17 ಯಾವುದೇ ಪದಾರ್ಥ ಕೊಳ್ಳುವ ಮುನ್ನ ಯಾವೆಲ್ಲಾ ಪದಾರ್ಥ ಬಳಸಿದ್ದಾರೆ ಎಂದು ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!