ಸಾಮಾಗ್ರಿಗಳು
ನಾಟಿ ಕೋಳಿ
ಈರುಳ್ಳಿ
ಹಸಿಮೆಣಸು
ಖಾರದಪುಡಿ
ಕೊತ್ತಂಬರಿ ಕಾಳು ಪುಡಿ
ಚಕ್ಕೆ
ಲವಂಗ
ಕಾಯಿ
ಕೊತ್ತಂಬರಿ ಸೊಪ್ಪು
ಶುಂಠಿ
ಬೆಳ್ಳುಳ್ಳಿ
ಎಣ್ಣೆ
ಉಪ್ಪು
ಗಸಗಸೆ
ಕಡ್ಲೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಚಕ್ಕೆ, ಲವಂಗ, ಈರುಳ್ಳಿ ಹಾಗೂ ಒಂದೆರಡು ಹಸಿಮೆಣಸು ಹಾಕಿ ಬಾಡಿಸಿ
ಆನಂತರ ಈರುಳ್ಳಿ, ಟೊಮ್ಯಾಟೊ, ಶುಂಠಿ ಬೆಳ್ಳುಳ್ಳಿ ಹಾಕಿ ಬಾಡಿಸಿಕೊಳ್ಳಿ
ನಂತರ ಇದಕ್ಕೆ ಗಸಗಸೆ, ಕಡ್ಲೆ, ಕಾಯಿ, ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಕಾಳು ಪುಡಿ, ಖಾರದಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಒಲೆ ಉರಿ ಆಫ್ ಮಾಡಿ ತಣ್ಣಗಾಗಲು ಬಿಡಿ
ಆನಂತರ ಅದನ್ನು ರುಬ್ಬಿ ಇಟ್ಟುಕೊಳ್ಳಿ. ನಂತರ ಕುಕ್ಕರ್‌ಗೆ ಎಣ್ಣೆ ಹಾಕಿ, ಚಿಕನ್ ಹಾಕಿ ಮಿಕ್ಸ್ ಮಾಡಿ
ಉಪ್ಪು ಹಾಗೂ ಅರಿಶಿಣ ಹಾಕಿ, ಆನಂತರ ಮಸಾಲೆಯನ್ನು ಹಾಕಿ, ನೀರು ಹಾಕಿ ಕುದಿಸಿ
ನಂತರ ಒಂದು ಅಥವಾ ಎರಡು ವಿಶಲ್ ಕೂಗಿಸಿ ಆಫ್ ಮಾಡಿ. ವಿಶಲ್ ಬಿಟ್ಟ ನಂತರ ಮತ್ತೊಮ್ಮೆ ಕುದಿಸಿದ್ರೆ ಸಾರು ರೆಡಿ
ಇಡ್ಲಿ ಜೊತೆ ಇದು ಸೂಪರ್ ಕಾಂಬಿನೇಷನ್. ಮಧ್ಯಾಹ್ನ ಇದಕ್ಕೇ ಅನ್ನ ಹಾಗೂ ಮುದ್ದೆ ಮಾಡಿಕೊಳ್ಳಬಹುದು



