ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟ.. ಇಬ್ಬರು ಯೋಧರು ಹುತಾತ್ಮ, ಪೊಲೀಸರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಭಾರತೀಯ ಟಿಬೆಟಿಯನ್ ಬಾರ್ಡರ್ ಪೋಲೀಸ್ ನ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

ಇಂದು ಮುಂಜಾನೆ, ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲ್ ಗಸ್ತು ಶೋಧ ಕಾರ್ಯಾಚರಣೆಯಲ್ಲಿ ಪ್ರಮುಖ ಐಇಡಿ ಸ್ಫೋಟವನ್ನು ನಡೆಸಲಾಯಿತು.

ಐಜಿ ಬಸ್ತಾರ್ ಪಿ ಸುಂದರರಾಜ್ ಪ್ರಕಾರ, ನಕ್ಸಲರು ಐಟಿಬಿಪಿ ತಂಡದ ಮೇಲೆ ದಾಳಿ ನಡೆಸಿ ಐಇಡಿ ಸ್ಫೋಟ ನಡೆಸಿದರು. ಸ್ಫೋಟದ ವೇಳೆ ಇಬ್ಬರು ಐಟಿಬಿಪಿ ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಶುಕ್ರವಾರ, ಛತ್ತೀಸ್‌ಗಢದ ದಾಂತೇವಾಡ ಪೊಲೀಸರು ದಂತೇವಾಡ-ನಾರಾಯಣಪುರ ಗಡಿಗೆ ಸಮೀಪವಿರುವ ಅಬುಜ್ಮದ್ ಅರಣ್ಯದಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 38 ನಕ್ಸಲರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದರು.

ದಂತೇವಾಡ ಪೊಲೀಸರು ನೀಡಿದ ಹೇಳಿಕೆ ಪ್ರಕಾರ, ದಂತೇವಾಡ-ನಾರಾಯಣಪುರ ಗಡಿ ಸಮೀಪದ ನೆಂದೂರು ಮತ್ತು ತುಳುತುಳಿ ಗ್ರಾಮದ ಅರಣ್ಯದೊಳಗೆ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ 38 ನಕ್ಸಲರು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!