August 24, 2026
Monday, August 24, 2026
spot_img

ನೆಲಬಾಂಬ್ ನಿಷ್ಕ್ರಿಯಗೊಳಿಸುವಾಗ ಐಇಡಿ ಸ್ಫೋಟ: ನಾಲ್ವರು ಯೋಧರು ಹುತಾತ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸುತ್ತಿದ್ದ ಕಾರ್ಯಾಚರಣೆ ವೇಳೆ ಸಂಭವಿಸಿದ ಭೀಕರ ಸ್ಫೋಟ ನಾಲ್ವರು ಯೋಧರ ಪ್ರಾಣ ಕಸಿದುಕೊಂಡಿದೆ.

ಕಂಕೇರ್-ನಾರಾಯಣಪುರ ಗಡಿ ಭಾಗದಲ್ಲಿ ನೆಲಬಾಂಬ್ ಪತ್ತೆ ಹಾಗೂ ನಿಷ್ಕ್ರಿಯಗೊಳಿಸುವ ಕಾರ್ಯದ ವೇಳೆ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ:

ಛೋಟೆಬೇಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ತಂಡ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ, ನೆಲದಲ್ಲಿ ಅಡಗಿಸಿಟ್ಟಿದ್ದ ಐಇಡಿ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಹಲವರು ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಯೋಧರು ಹುತಾತ್ಮರಾದರು. ಮೃತರಲ್ಲಿ ಡಿಆರ್‌ಜಿ ಉಸ್ತುವಾರಿ ಸುಖರಾಮ್ ವಟ್ಟಿ, ಕಾನ್‌ಸ್ಟೆಬಲ್ ಕೃಷ್ಣ ಕೊಮ್ರಾ, ಸಂಜಯ್ ಗಡ್‌ಪಾಲೆ ಹಾಗೂ ಪರಮಾನಂದ ಕೊರ್ರಂ ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪರಮಾನಂದರನ್ನು ರಾಯ್‌ಪುರಕ್ಕೆ ಏರ್‌ಲಿಫ್ಟ್ ಮಾಡಲಾಗುತ್ತಿದ್ದರೂ ಜೀವ ಉಳಿಸಲಾಗಲಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !