October 9, 2026
Friday, October 9, 2026
spot_img

FOOD | ಹತ್ತೆ ನಿಮಿಷದಲ್ಲಿ ತಯಾರಾಗು ಗರಗರಿಯಾದ ರವೆ ವಡೆ ಮಾಡಿ ಸವಿಯಿರಿ!

ಹತ್ತೆ ನಿಮಿಷದಲ್ಲಿ ಮಾಡಬಹುದಾದ ಅತ್ಯಂತ ಸುಲಭವಾದ ಸ್ನಾಕ್ಸ್ ಎಂದರೆ ಅದು ರವೆ ವಡೆ. ಇದು ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೆ ಇಷ್ಟವಾಗುವ ತಿಂಡಿಯಾಗಿದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭವಾಗಿದೆ. ನೀವು ಇಮ್ಮೆ ಮಾಡಿ ನೋಡಿ.

ಇದಕ್ಕೆ ಬೇಕಾಗುವ ಸಾಮಾಗ್ರಿಗಳು

ರವೆ
ಮೊಸರು
ಈರುಳ್ಳಿ
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ರವೆ, ಮೊಸರು, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಮತ್ತು ಉಪ್ಪನ್ನು ಬೆರೆಸಿ 5-10 ನಿಮಿಷ ನೆನೆಯಲು ಬಿಡಬೇಕು. ಮಿಶ್ರಣ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿಕೊಳ್ಳಬಹುದು. ಬಳಿಕ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಸಣ್ಣ ಉಂಡೆಗಳನ್ನು ಮಾಡಿ, ವಡೆಯ ಆಕಾರದಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಬಣ್ಣ ಬರುವವರೆಗೆ ಕರಿದರೆ ರುಚಿಯಾದ, ಗರಿಗರಿಯಾದ ರವೆ ವಡೆ ಸಿದ್ಧವಾಗುತ್ತದೆ.

Must Read