ಹೊಸದಿಗಂತ ವರದಿ, ಗದಗ :
ಕಾಂಗ್ರೆಸ್‌ನವರು ಎಷ್ಟು ಚೆಡ್ಡಿ ಸುಡುತ್ತಾರೆ ಅದರ ಹತ್ತರಷ್ಟು ಚಡ್ಡಿಗಳು ಹೊಸ ಹೊಸ ಚಡ್ಡಿಗಳು ಉತ್ಪತ್ತಿಯಾಗುತ್ತವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್‌ಎಸ್‌ಎಸ್ ನಮ್ಮ ಮಾತೃಸಂಸ್ಥೆ ಅದು ನಮಗೆ ಮಾರ್ಗದರ್ಶನ ನೀಡುತ್ತದೆ. ಆ ಸಂಸ್ಥೆಯನ್ನು ವಿನಾಕಾರಣವನ್ನು ತೆಗಳುವುದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಶಿಕ್ಷಣ ಸಚಿವರ ಮನೆ ಸುಡುವದನ್ನು ಎನ್‌ಎಸ್‌ಯುಐ ಯುವಕರಿಗೆ ಹೇಳಿಕೊಡುತ್ತಿದೆ. ಅವರು ಚೆಡ್ಡಿ ಸುಡುವದರಿಂದ ಅಳಿದುಳಿದ ಹಿಂದೂ ಮತಗಳು ನಮಗೆ ಬರಲಿವೆ ಎಂದರು.
ಆರ್‌ಎಸ್‌ಎಸ್ ರಾಜಕೀಯ ಸಂಘಟನೆ ಅಲ್ಲ, ಅದು ದೇಶಭಕ್ತ ಸಂಘಟನೆಯಾಗಿದೆ. ಸದ್ವೀಚಾರ ಹೊಂದಿರುವ ಸಂಘಟನೆಯ ಕಾರ್ಯಕರ್ತರ ಚೆಡ್ಡಿ ಸುಡುತ್ತಿವೆ ಎಂದು ಸಿದ್ದರಾಮಯ್ಯ ಹೇಳುತ್ತಿರುವುದು ಅವರ ಘನತೆಗೆ ತಕ್ಕುದಲ್ಲ, ಹಿಂದಿನ ಪ್ರದಾನ ಜವಾಹರಲಾಲು ನೆಹರು ಅವರು ಆರ್‌ಎಸ್‌ಎಸ್ ಸಂಘಟನೆ ಕಿತ್ತು ಹಾಕುತ್ತನೆ ಎಂದು ಹೇಳಿದ್ದರು ಎನ್ನುವದನ್ನು ನೆನಪಿಸಿಕೊಳ್ಳಬೇಕೆಂದು ತಿರುಗೇಟು ನೀಡಿದರು. ಭಾರತೀಯರನ್ನು ಪ್ರೀತಿ ಮಾಡುವ ಎಲ್ಲರನ್ನೂ ಬಿಜೆಪಿ ಗೌರವಿಸುತ್ತದೆ. ಖಾನಾಪೀನಾ ಹಿಂದುಸ್ತಾನಕಾ ಸೋಚನಾ ಪಾಕಿಸ್ತಾನಕಾ ನಂತಿರಬಾರದು ಎಂದು ಹೇಳಿದರು.
ಕಾಂಗ್ರೆಸ್‌ನ ಟಾರ್ಗೆಟ್ ಡಿ.ಕೆ.ಶಿವಕುಮಾರ ಆಗಿದ್ದಾರೆ. ಡಿ.ಕೆ.ಶಿವಕುಮಾರ ವರ ಟಾರ್ಗೇಟ್ ಕಾಂಗ್ರೆಸ್ ಆಗಿದೆ. ಅದಕ್ಕೆ ಉದಾಹರಣೆ ಅವರ ಹೈಕಮಾಂಡ ಬಣ ರಾಜಕೀಯ, ತಿಕ್ಕಾಟ ಬಿಡಬೇಕೆಂದು ಹೇಳಿದ್ದು ನಾವಲ್ಲ, ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದರು.
ಸಿ.ಎಂ ಇಬ್ರಾಂಹಿಂ ಅಂದರೆ ಮಾಸ್ಟರ್ ಹಿರಣ್ಯಯ್ಯ ಅವರ ನಾಟಕ ಇದ್ದ ಹಾಗೆ ಅವರ ಒಂದು ಪ್ರದರ್ಶನದ ಡೈಲಾಗಗಳು ಮತ್ತೊಂದು ಪ್ರದರ್ಶನದಲ್ಲಿ ಇರುವದಿಲ್ಲ ಅದರಂತೆ ಇಬ್ರಾಂಹಿಂ ಅವರು ಕಾಂಗ್ರೆಸ್‌ನಲ್ಲಿ ಏನು ಮಾತನಾಡಿದ್ದರೂ, ಈಗ ಜೆಡಿಎಸ್‌ನಲ್ಲಿ ಏನು ಮಾತನಾಡುತ್ತಿದ್ದಾರೆ ನೀವೇ ನೋಡಿ ಎಂದು ಸಚಿವರು ಹೇಳಿದರು.