ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧ ತಾರಕ್ಕೇರಿದ್ದು, ‘ನೀವು ನನ್ನ ಜನರನ್ನು ಹಿಂಸೆ ಮಾಡಿದರೆ, ನಾನು ನಿಮ್ಮ ಇಡೀ ನಗರವನ್ನು ಧ್ವಂಸ ಮಾಡ್ತೇನೆ..’ ಇಸ್ರೇಲ್ ಸ್ಪಷ್ಟ ನಿಲುವು ತಾಳಿದೆ.
ನೀರು, ವಿದ್ಯುತ್, ಆಹಾರವನ್ನು ಸಂಪೂರ್ಣವಾಗಿ ಇಸ್ರೇಲ್ ಬಂದ್ ಮಾಡಿದೆ. ಇದರ ನಡುವೆ ಗಾಜಾ ಪ್ರದೇಶಕ್ಕೆ ಸರಬರಾಜುಗಳನ್ನು ಹೊತ್ತ ಟ್ರಕ್‌ಗಳನ್ನು ಕಳಿಸಲು ನೆರೆಯ ದೇಶ ಈಜಿಪ್ಟ್ ಸಿದ್ಧವಾಗಿತ್ತು. ಈ ವೇಳೆ ಈಜಿಪ್ಟ್‌ಗೆ ಇಸ್ರೇಲ್ ನೇರ ಎಚ್ಚರಿಕೆ ನೀಡಿದ್ದು, ಹಾಗೇನಾದರೂ ನಿಮ್ಮ ಸರಬರಾಜುಗಳನ್ನು ಹೊತ್ತ ಟ್ರಕ್‌ಗಳು ಗಾಜಾಕ್ಕೆ ಬಂದಲ್ಲಿ ಅವುಗಳಿಗೂ ಬಾಂಬ್ ಬೀಳುತ್ತದೆ ಎಂದು ಎಚ್ಚರಿಕೆ ರವಾನಿಸಿದೆ.
ಇಸ್ರೇಲ್‌ನ ಈ ಎಚ್ಚರಿಕೆ ಕೇಳಿದ ಕೂಡಲೇ ವಿಶ್ವಕ್ಕೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮಾಡಲಿರುವ ಕಾರ್ಯಾಚರಣೆಯ ಬಗ್ಗೆ ಇನ್ನಷ್ಟು ಆತಂಕ ಉಂಟಾಗಿದೆ.
ಇಸ್ರೇಲ್ ಸೇನೆಯ ಮುಂದಿನ ಕಾರ್ಯಾಚರಣೆಗಳ ಬಗ್ಗೆ ಮಿಲಿಟರಿ ವಕ್ತಾರರು ಮಾತನಾಡಿದ್ದು, ನಮ್ಮ ದಾಳಿಯ ವ್ಯಾಪ್ತಿ ಮೊದಲಿಗಿಂತ ದೊಡ್ಡದಾಗಿರುತ್ತದೆ ಮತ್ತು ಬಹಳ ತೀವ್ರವಾಗಿರುತ್ತದೆ. ಹಮಾಸ್ ವಿರುದ್ಧ ಬಹಳ ಎಂದರೆ, ಬಹಳ ಆಕ್ರಮಣಕಾರಿಯಾಗಿ ದಾಳಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.