ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನಲ್ಲಿದ್ದಾರೆ. ಅನೇಕರು ಈ ಘಟನೆ ಕುರಿತು ಪರ ವಿರೋಧಗಳನ್ನು ಮಾತನಾಡುತ್ತಿದ್ದಾರೆ.
ದರ್ಶನ್ ಜೊತೆ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟ ನಟ, ನಿರ್ದೇಶಕ, ನಿರ್ಮಾಪಕ ಓಂ ಪ್ರಕಾಶ್ ರಾವ್ ಅವರು 10 ವರ್ಷಗಳಿಂದ ದರ್ಶನ್ ಅವರನ್ನು ಮಾತನಾಡಿಸಿಲ್ಲ. ಈಡಿಗ ಓಂ ಪ್ರಕಾಶ್ ರಾವ್ ಅವರು 10 ವರ್ಷಗಳಿಂದ ದರ್ಶನ್ ಜತೆ ಏಕೆ ಅಂತರ ಇಟ್ಟರು? ಹಾಗೇ ದರ್ಶನ್ ಕೊಲೆ ಕೇಸ್ ಬಗ್ಗೆ ಹಲವಾರು ವಿಚಾರಗಳನ್ನು ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದಾರೆ.
ದರ್ಶನ್ ಅವರಿಗೆ ಇದು ಬೇಕಾಗಿರಲಿಲ್ಲ. ಅವರಿಗಿರುವ ಫಾಲೋವರ್ಸ್‌ಗಳು, ಫೇಮ್, ಪಬ್ಲಿಸಿಟಿ ಎಲ್ಲ ಅಪಾರವಾಗಿತ್ತು. ಇದೀಗ ಸಣ್ಣ ವಿಷಯಕ್ಕೆ ಆರೋಪ ಸ್ಥಾನದಲ್ಲಿ ಇದ್ದಾರೆ ಎಂದಾಗ ಬೇಜಾರಾಯ್ತು. ಆರೋಪಿ ಸ್ಥಾನದಲ್ಲಿ ಇದ್ದಾರೆ ಎಂದರೆ ತುಂಬ ದುಃಖವಾಗಿದೆ. ಸಿನಿಮಾದಲ್ಲಿ ಜಗಳ ಎಂದು ಬಂದಾಗ, ಸಿನಿಮಾಗೋಸ್ಕರ ಅಷ್ಟೇ. ಆದರೆ ವೈಯಕ್ತಿಕವಾಗಿ ತೆಗೋಬಾರದು. ನನಗೆ ತುಂಬ ಗೌರವ ಕೊಟ್ಟ ನಟ ಎಂದರೆ ದರ್ಶನ್ ಎಂದರು.
ದರ್ಶನ್ ಹಾಗೂ ನನ್ನ ಸ್ನೇಹ ಚೆನ್ನಾಗಿಯೇ ಇತ್ತು. ನಮಗೆ ಒಂದು ಜ್ಞಾನ ಇರುತ್ತೆ. ಸಡನ್ ಆಗಿ ಯಾರೋ ಹೇಳಿದ್ದು ಕೇಳೋದು ತಪ್ಪು. ಆದರೆ ದರ್ಶನ್ ಯಾರೋ ಹೇಳಿದ್ದನ್ನು ಬೇಗ ಕೇಳುತ್ತಿದ್ದ. ನನ್ನ ದರ್ಶನ್ ಮಧ್ಯೆ ಮನಸ್ತಾಪ ತಂದಿಟ್ಟಿದ್ದು ನಿಖಿತಾ ಎಂಬ ಕಲಾವಿದೆ. ಯಾವುದೋ ಒಂದು ವಿಷಯವನ್ನು ತಿರುಚಿ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲರೂ ಅವರ ಅವರ ಸೇಫ್ಟಿ ನೋಡ್ಕೋತ್ತಾರೆ ಅನ್ಸತ್ತೆ. ಹಾಗೇ ನನ್ನ ದರ್ಶನ್ ಜತೆ ವೈಮನಸ್ಸು ಆಯ್ತು. ಆ ಬಗ್ಗೆ ತುಂಬ ಸಲ ಬೇಜಾರು ಮಾಡಿಕೊಂಡಿದ್ದು ಇದೆ ಎಂದರು.
ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ದರ್ಶನ್ ಅಪಾರ ಗೌರವ ನೀಡುತ್ತಿದ್ದರು. ಒಂದು ವೇಳೆ ಇಂದು ಅಂಬರೀಶ್ ಇದ್ದಿದ್ದರೆ ಪರಿಸ್ಥಿತಿ ದರ್ಶನ್ ಕಪಾಳಕ್ಕೆ ಹೊಡೆಯುತ್ತಿದ್ದರು. ಕರೆದು ಬುದ್ಧಿ ಹೇಳುತ್ತಿದ್ದರು. ಬಾರೋ ಇಲ್ಲಿ.. ನೀನು ಮಾಡುತ್ತಿರುವುದು ತಪ್ಪು ಅಂತ ಖಂಡಿತಾ ಹೇಳಿರುತ್ತಿದ್ದರು. ಸುಮಲತಾ ಕೂಡ ಮಾತನಾಡುತ್ತಾರೆ. ಅದರ ಬಗ್ಗೆ ಅನುಮಾನ ಬೇಡ’ ಎಂದು ಓಂ ಪ್ರಕಾಶ್ ರಾವ್ (Om Prakash Rao) ಹೇಳಿದ್ದಾರೆ.
ದರ್ಶನ್ ಅವರಿಗೆ ತುಂಬ ಫ್ಯಾನ್ಸ್ ಇದ್ದಾರೆ. ಕೆಲವರು ದರ್ಶನ್ ಬಗ್ಗೆ ಮಾತಾಡುತ್ತಿಲ್ಲ. ನೀವು ಮೈಕ್ ಹಿಡಿತ್ತಿದ್ದೀರಾ ಅಷ್ಟೇ ಗನ್ ಏನೂ ತೋರಿಸಿಲ್ಲ. ಆದರೆ ಮಾತನಾಡಬೇಕು. ಆದರೆ ಯಾವುದೇ ಕಲಾವಿದರು ಮಾತನಾಡುತ್ತಿಲ್ಲ. ಕೆಲವರು ದರ್ಶನ್ ಜತೆ ಪ್ರೀತಿಯಲ್ಲಿ ಇದ್ದಾಗ ಹೇಗಿತ್ತು ಒಡನಾಟ ಎಂಬುದು ಮಾತನಾಡಿ. ಇದರಲ್ಲಿ ತಪ್ಪೇನಿಲ್ಲ. ಒಂದು ವಿಷಯ ಏನೆಂದರೆ, ಬ್ಯಾನ್ ಎನ್ನುವ ವರ್ಡ್ ಬಂತು. ಬ್ಯಾನ್ ಏಕೆ ಮಾಡಬೇಕು? ಆಗಿನ ಕಾಲಕ್ಕೆ ನಿಖಿತಾ ಅವರನ್ನೂ ಬ್ಯಾನ್ ಮಾಡಬೇಕು ಎಂಬ ಮಾತುಗಳು ಬಂದಿದ್ದವು. ಯಾರು ರೂಲ್ಸ್ ಮಾಡಿಲ್ಲ. ಮಾತುಕತೆ ಬಂದಿತ್ತು ಅಷ್ಟೇ ಎಂದರು.