ಹೆರಿಗೆ ವೇಳೆ ಶಿಶುವಿನ ತಲೆ ಕತ್ತರಿಸಿ ಮಹಿಳೆಯ ಗರ್ಭದಲ್ಲೇ ಬಿಟ್ಟ ವೈದ್ಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದಲ್ಲಿ 32 ವರ್ಷದ ಹಿಂದು ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಯ ಸಿಬ್ಬಂದಿ ಆಕೆಯ ಹೊಟ್ಟೆಯಲ್ಲಿದ್ದ ಮಗುವಿನ ತಲೆ ಕತ್ತರಿಸಿ, ಅದನ್ನು ಹೊರತೆಗೆಯಲಾಗದೆ ಗರ್ಭದಲ್ಲೇ ಬಿಟ್ಟಿರುವ ಘಟನೆ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ತಾರ್ಪಾರ್ಕರ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ವಾಸವಾಗಿದ್ದ ಭೀಲ್ ಹಿಂದು ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮೊದಲು ತನ್ನ ಪ್ರದೇಶದಲ್ಲಿನ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ಆದರೆ ಮಹಿಳಾ ಸ್ತ್ರೀರೋಗತಜ್ಞರು ಲಭ್ಯವಿಲ್ಲದ ಕಾರಣ ಯಾವುದೇ ಅನುಭವವಿಲ್ಲದ ಆಸ್ಪತ್ರೆಯ ಸಿಬ್ಬಂದಿ ಸೇರಿಕೊಂಡು ಆಕೆಗೆ ಹೆರಿಗೆ ಮಾಡಿಸಲು ಪ್ರಯತ್ನಿಸಿದ್ದೆ ಈ ಎಡವಟ್ಟಿಗೆ ಕಾರಣವಾಗಿದೆ.
ಆಕೆ ಗಂಭೀರ ಸ್ಥಿತಿಯಲ್ಲಿದ್ದುದರಿಂದ ಹತ್ತಿರದ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಯೂ ಯಾವುದೇ ವ್ಯವಸ್ಥೆ ಇಲ್ಲದ ಕಾರಣ, ಅಲ್ಲಿಂದ ಎಲ್​ಯುಎಮ್​ಎಚ್​ಎಸ್​ ಆಸ್ಪತ್ರೆಗೆ ತರಲಾಗಿದೆ.
ಎಲ್​ಯುಎಮ್​ಎಚ್​ಎಸ್​ ಆಸ್ಪತ್ರೆಯಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿ ಉಳಿದಿದ್ದ ನವಜಾತ ಶಿಶುವಿನ ತಲೆಯನ್ನು ಹೊರತೆಗೆಯಲಾಗಿದೆ. ಇದರಿಂದ ತಾಯಿಯ ಗರ್ಭಕ್ಕೆ ಪೆಟ್ಟಾಗಿದ್ದು, ಆಕೆಯ ಜೀವ ಉಳಿಸಲಾಗಿದೆ.

ತನಿಖೆಗೆ ಸೂಚನೆ

ಇನ್ನು ಪ್ರಸೂತಿ ವೈದ್ಯರು ಇರದಿದ್ದರೂ, ಅನುಭವಿ ವೈದ್ಯರು ಗರ್ಭಿಣಿಗೆ ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಕ್ಕೆ ಎರವಾಗಿದ್ದ ವೈದ್ಯರ ವಿರುದ್ಧ ಕ್ರಮ ಮತ್ತು ತನಿಖೆಗೆ ಆದೇಶಿಸಲಾಗಿದೆ. ಮಹಿಳೆ ಒದ್ದಾಡುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ವೈದ್ಯ ಸಿಬ್ಬಂದಿಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!