ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮುಗಲಭೆ ಮೊದಲಿನಂತೆ ಹೆಚ್ಚಲಿವೆ: ಜಗದೀಶ್ ಶೆಟ್ಟರ್

ಹೊಸದಿಗಂತ ವರದಿ, ಹುಬ್ಳಳ್ಳಿ
ಕಾಂಗ್ರೆಸ್ ಅಕಾರದಲ್ಲಿದ್ದಾಗ ಹಿಂದೂ, ಮುಸ್ಲಿಂ ಕೋಮುಗಲಭೆ ಹಾಗೂ ಹಿಂದೂಗಳ ಹತ್ಯೆಯಾಗಿವೆ. ಮತ್ತೆ ಅವರು ಅಕಾರಕ್ಕೆ ಬಂದರೆ ಅದು‌ ಮೊದಲಿನಂತೆ ಹೆಚ್ಚಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಕಾಂಗ್ರೆಸ್ ನವರು 60 ವರ್ಷ ಆಳ್ವಿಕೆ ನಡೆಸಿದಾಗ ಹಿಂದೂ ಮುಸ್ಲಿಂ ಗಲಭೆಗಳು ಆಗುತ್ತಿದ್ದವು. ಮೋದಿಯವರು ಅಕಾರಕ್ಕೆ ಬಂದ ಬಳಿಕ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದರು.‌ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬೆಳಿಗ್ಗೆಯಿಂದ ಸಂಜೆಯವರಿಗೆ ಹಿಂದೂ ವಿರೋ ಟಿಪ್ಪು ಸುಲ್ತಾನ ಪೂಜಿಸುತ್ತಾರೆ. ಇತ್ತ ಟಿಪ್ಪು ಸುಲ್ತಾನ ಹೊಗಳಿ ಆರ್‌ಎಸ್‌ಎಸ್ ಬೈಯುವುದು ಸಿದ್ದರಾಮಯ್ಯ ಅವರು ಗುಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕಾರದ ಆಸೆಗೆ ಡಿ.ಕೆ. ಶಿವಕುಮಾರ ಅವರು ಸಿಗುವ ಎಲ್ಲ ವೇದಿಕೆ ದುರಪಯೋಗ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್‌ನವರ ಸಹಜ ಗುಣವಾಗಿದೆ ಎಂದು ಒಕ್ಕಲಿಗರ ಮೀಸಲಾತಿ ಹೋರಾಟದ ಸಭೆಯಲ್ಲಿ ಡಿ.ಕೆ.ಶಿವಕುಮಾರ ಹೇಳಿಕೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರ ಜಗಳದಿಂದ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಪಂಜಾಬ ಸಿದ್ದುನಂತೆ ರಾಜ್ಯದ ಸಿದ್ದುಯಿಂದ ಕಾಂಗ್ರೆಸ್ ನಿರ್ಣಾಮವಾಗುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!