ಕಾಂಗ್ರೆಸ್ ಬೇಕಾದ್ರೆ ಮೋದಿ ಫೋಟೊ ಬಳಸಿಕೊಂಡು ಚುನಾವಣೆ ಪ್ರಚಾರ ನಡೆಸಲಿ: ರಾಧಾ ಮೋಹನ್ ದಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ದೇಶಕ್ಕೆ ಮೋದಿ ಪ್ರಧಾನಿ, ಕಾಂಗ್ರೆಸ್ ಕೂಡ ಮೋದಿ ಭಾವಚಿತ್ರವನ್ನು ಚುನಾವಣಾ ಪ್ರಚಾರದಲ್ಲಿ ಬಳಸಬಹುದು ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರದಲ್ಲಿ ಮಾಜಿ ಸಚಿವ, ಬಿಜೆಪಿ ಬಂಡಾಯ ಅಭ್ಯರ್ಥಿ ಈಶ್ವರಪ್ಪ ಅವರು ಮೋದಿ ಅವರ ಭಾವಚಿತ್ರ ಬಳಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು. ಈಶ್ವರಪ್ಪನಿಗೆ ಬುದ್ಧಿ ಬಂದಿದೆ. ಮೋದಿ ಮತ್ತು ಬಿಜೆಪಿ ಪರ ಹೋರಾಡಲು ನಾವು ಅವರಿಗೆ ಅವಕಾಶ ನೀಡಿದ್ದೇವೆ, ಅದನ್ನು ಮಾಡಲಿ. ಹಾಗಾಗಿಯೇ ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಭಾರಿ ಅಂತರದಿಂದ ಗೆಲ್ಲುತ್ತಾರೆ ಎಂದಿದ್ದಾರೆ.

ಕಾಂಗ್ರೆಸ್ ರಾಹುಲ್ ಗಾಂಧಿ ಫೋಟೋ ಬಳಸಿದರೆ ಅವರಿಗೆ ಜಾಮೀನು ಕೂಡ ಸಿಗುವುದಿಲ್ಲ, ಜಾಮೀನು ನೀಡಿದರೂ ರದ್ದಾಗುತ್ತದೆ. ದೇವರು ಎಲ್ಲರಿಗೂ ಒಂದೇ. ಮೋದಿಯನ್ನು ದೇವರಿಗೆ ಹೋಲಿಸಿದ ಅವರು, ದೇವರು ಒಂದು ಪಕ್ಷಕ್ಕೆ ಸೀಮಿತವಲ್ಲ. ಭಾರತದಲ್ಲಿ 140 ಕೋಟಿ ಜನರು ಮೋದಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಅರ್ಧಕ್ಕಿಂತ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಮೋದಿಗೆ ಮತ ಹಾಕುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!