ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿ:
ಬದನೇಕಾಯಿ ಒಂದು ಬೌಲ್, ಶೇಂಗಾ ಬೀಜ ಹಾಗೂ ಹುರಿಕಡಲೆ, ಜೀರಿಗೆ ಒಂದು ಚಮಚ, ಕರಿ ಎಳ್ಳು ಕಾಲು ಚಮಚ, ಒಣ ಕೊಬ್ಬರಿ ಅರ್ಧಕಡಿ, ಮಸಾಲೆ ಪುಡಿ ಎರಡು ಚಮಚ, ಅರಶಿನಪುಡಿ ಅರ್ಧ ಚಮಚ, ಇಂಗು ಸ್ವಲ್ಪ, ಮೆಣಸಿನ ಹುಡಿ ನಾಲ್ಕು ಟೀ ಸ್ಪೂನ್, ನಾಲ್ಕು ಲವಂಗ, ಸಣ್ಣ ತುಂಡು ಚೆಕ್ಕೆ, ಎಲಕ್ಕಿ ಕಾಳು, ಬೆಳ್ಳುಳ್ಳಿ ಒಂದುಗಡ್ಡೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು. ತೆಂಗಿನೆಣ್ಣೆ, ಹುಣಸೇ ರಸ, ದೊಡ್ಡ ಗಾತ್ರದ ನೀರುಳ್ಳಿ.
ಮಾಡುವ ವಿಧಾನ: ಶೇಂಗಾ ಹಾಗೂ ಹುರಿಗಡಲೆ ಪ್ರತ್ಯೇಕ ಹುರಿದಿಟ್ಟುಕೊಳ್ಳಿ. ನಂತರ ಮೇಲೆ ಹೇಳಿದ ಎಲ್ಲಾ ಮಸಾಲೆಗಳನ್ನು ಹುರಿದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ.
ಶೇಂಗಾ ಮತ್ತು ಹುರಿಕಡಲೆಯನ್ನು ಹುಡಿಮಾಡಿ. ಈ ಎರಡೂ ಪುಡಿಗಳನ್ನು ಚೆನ್ನಾಗ್ ಮಿಶ್ರಮಾಡಿಕೊಂಡು ಒಂದೆರಡು ಸ್ಪೂನ್ ತೆಂಗಿನೆಣ್ಣೆ ಬೆರೆಸಿ ಚೆನ್ನಾಗಿ ಕಲೆಸಿಕೊಳ್ಳಿ. ಬದನೇಕಾಯಿಯನ್ನು ಚೆನ್ನಾಗಿ ತೊಳೆದು ನಾಲ್ಕು ಭಾಗವಾಗಿ ಮಾಡಿ ಅದರೊಳಗೆ ಈ ಮಿಶ್ರಣವನ್ನು ತುಂಬಿಟ್ಟುಕೊಳ್ಳಿ.
ಸ್ಟೌಮೇಲೆ ಕುಕ್ಕರ್ ಪಾತ್ರೆಯಿಟ್ಟು ತೆಂಗಿನೆಣ್ಣೆ ಸುರಿಯಿರಿ. ಈರುಳ್ಳಿಯನ್ನು ಕತ್ತರಿಸಿ ತೆಂಗಿನೆಣ್ಣೆಯಲ್ಲಿ ಫ್ರೈಮಾಡಿ. ಮಸಾಲೆ ತುಂಬಿರುವ ಬದನೇಕಾಯಿಯನ್ನು ಸೇರಿಸಿ. ಹುಣಸೆ ರಸ ಹಾಗೂ ನೀರು ಹಾಕಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಒಂದು ವಿಸಿಲ್ ಆದ ತಕ್ಷಣ ಕುಕ್ಕರ್ ಆಫ್ ಮಾಡಿ. ವಿಸಿಲ್ ಹೋದ ನಂತರ ತೆಗೆಯಿರಿ. ರುಚಿ ರುಚಿಯಾದ ಎಣ್ಣೆಗಾಯಿ ರೆಡಿ.