VIRAL VIDEO| ಬಿಸಿಲಿನ ತಾಪ ತಾಳಲಾರದೆ ಫ್ರಿಡ್ಜ್‌ನಲ್ಲಿ ಕುಳಿತ ಯುವಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದಲ್ಲಿ ಬಿಸಿಲಿನ ತಾಪ ತಾಳಲಾರದೆ ಜನ ಪರದಾಡುತ್ತಿದ್ದಾರೆ. ಯುವಕನೊಬ್ಬ ಕೂಲ್‌ ಆಗಿರಲು ಫ್ರಿಡ್ಜ್ ನಲ್ಲಿ ಕುಳಿತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಚೀನಾದ ಗುವಾಂಗ್‌ಡಾಂಗ್‌ನಲ್ಲಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರಿಂದ ಜನ ವಿಲವಿಲ ಒದ್ದಾಡುತ್ತಿದ್ದಾರೆ. ಯುವಕನೊಬ್ಬ ರೆಫ್ರಿಜರೇಟರ್‌ನಲ್ಲಿ ಸ್ಟೂಲ್ ಮೇಲೆ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ಅವನ ಪಕ್ಕದಲ್ಲಿ ವಿವಿಧ ಪಾನೀಯಗಳು ಕಂಡುಬರುತ್ತವೆ. ಫ್ರಿಜ್ ನಲ್ಲಿ ಕುಳಿತು ಸೆಲ್ ಫೋನ್ ನೋಡುತ್ತಿರುವುದು ಗಮನಾರ್ಹ.

ಈ ವಿಡಿಯೋಗೆ ನೆಟ್ಟಿಗರು ವಿವಿಧ ಕಮೆಂಟ್‌ ಮಾಡುತ್ತಿದ್ದಾರೆ. ಇಂತಹ ಸಾಹಸಗಳನ್ನು ಮಾಡುವುದು ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಜನರು ಪರಿಸ್ಥಿತಿಯನ್ನು ನಿಭಾಯಿಸಲು ಐಸ್ ಪ್ಯಾಕ್‌ಗಳು, ತಣ್ಣನೆಯ ಕಲ್ಲಂಗಡಿ ಜ್ಯೂಸ್ ಮತ್ತು ಐಸ್ಡ್ ಟೀಯಂತಹ ಪಾನೀಯಗಳನ್ನು ಅವಲಂಬಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!