Thursday, February 29, 2024

ನಾನು ನಿಂತರೆ ಮಂಡ್ಯದಿಂದಲೇ …ಇಲ್ಲ ನನಗೆ ರಾಜಕೀಯವೇ ಬೇಡ: ಸಂಸದೆ ಸುಮಲತಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನು ನಿಂತರೆ ಮಂಡ್ಯದಿಂದಲೇ. ಇಲ್ಲ ಅಂದರೆ ನನಗೆ ರಾಜಕೀಯವೇ ಬೇಡ ಎಂದು ಸಂಸದೆ ಸುಮಲತಾ (Sumalatha) ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಜೆಡಿಎಸ್‌ಗೆ ಮಂಡ್ಯ ಟಿಕೆಟ್ ಹೋದರೆ ಮುಂದಿನ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿ ಆದಾಗ ಮುಂದೆ ನೋಡೋಣ. ಆಗ ನನ್ನ ನಿಲುವು ಹೇಳ್ತೀನಿ. ಆದರೆ ಈಗಲೂ ನನಗೆ ವಿಶ್ವಾಸ ಇದೆ. ಬಿಜೆಪಿ ಮಂಡ್ಯ ಉಳಿಸಿಕೊಳ್ಳುತ್ತೆ. ನನಗೆ ಟಿಕೆಟ್ ಸಿಗುತ್ತೆ ಎಂದು ತಿಳಿಸಿದ್ದಾರೆ.

ಇವತ್ತು ಬಿಜೆಪಿ ಮುಖಂಡರು, ವಿಧಾನಸಭೆಯಲ್ಲಿ ಸೋತ ಅಭ್ಯರ್ಥಿಗಳು ಬಂದಿದ್ದರು. ಲೋಕಸಭೆ ಚುನಾವಣೆ ಬರ್ತಿದೆ. ಯಾವ ನಿರ್ಧಾರ ಮಾಡಬೇಕು ಅಂತಾ ಚರ್ಚೆ ಮಾಡಿದ್ವಿ. ಯಾವ ರೀತಿ ಕೆಲಸ ಮಾಡಬೇಕು ಎಂತಲೂ ಚರ್ಚೆ ಮಾಡಿದ್ವಿ. ಸಿಟ್ಟಿಂಗ್ ಎಂಪಿ ಎನ್ನುವ ಸ್ಥಾನ ಇದ್ದೇ ಇರುತ್ತೆ. ಸಿಟ್ಟಿಂಗ್ ಎಂಪಿಗೆ ಮೊದಲ ಪ್ರಾಶಸ್ತ್ಯ ಅಂತಾ ಎಲ್ಲಾ ಪಕ್ಷದಲ್ಲಿ ಇದೆ. ನಮ್ಮ ಕಾರ್ಯಕರ್ತರು ಅದನ್ನ ಬಯಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಉತ್ತಮ ಮತ ಬಂದಿದೆ. ಈ ವಾತಾವರಣದಲ್ಲಿ ಎಲ್ಲರ ಆಸೆ ಬಿಜೆಪಿಯನ್ನ ಮಂಡ್ಯದಲ್ಲಿ ಉಳಿಸಬೇಕು. ಎಂಪಿ ಸೀಟು ಉಳಿಸಿಕೊಳ್ಳಬೇಕು ಅಂತಾ ಎಲ್ಲರು ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಧಿಕೃತವಾಗಿ ಬಿಜೆಪಿಯಿಂದ ನಮಗೆ ಸೂಚನೆ ಬಂದಿಲ್ಲ. ಹೈಕಮಾಂಡ್ ಎಲ್ಲೂ ಕೂಡಾ ಟಿಕೆಟ್ ಅವರಿಗೆ ಅಂತಾ ಹೇಳಿಲ್ಲ. ಜೆಡಿಎಸ್‌ಗೂ ಹೇಳಿಲ್ಲ, ನಮಗೂ ಹೇಳಿಲ್ಲ. ಮೈತ್ರಿ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅದರ ಬಗ್ಗೆ ನಾನು ಮಾತಾಡೊಲ್ಲ. ನನ್ನ ಗಮನವೇನಿದ್ರು ನನ್ನ ಕ್ಷೇತ್ರ, ನನ್ನ ಜಿಲ್ಲೆ. ನನ್ನ ಕೆಲಸದ ರಿಪೋರ್ಟ್ ನಿಮ್ಮ ಮುಂದೆ ಇದೆ. ಎಲ್ಲಾ ಎಂಪಿಗಳ ರೀತಿ ಕೆಲಸ ಮಾಡಿ ನಾನು ಪ್ರೂವ್ ಮಾಡಿದ್ದೇನೆ. ನನ್ನ ಬಗ್ಗೆ ಎಲ್ಲೂ ಕಪ್ಪು ಚುಕ್ಕಿ ಇಲ್ಲ. ಒಂದೇ ಒಂದು ಕಳಂಕ ನನ್ನ ಮೇಲೆ ಇದೆ. ಇದು ಬಿಜೆಪಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿನೇ ಮಂಡ್ಯ ಸೀಟು ಉಳಿಸುಕೊಳ್ಳುತ್ತೆ ಅನ್ನೋ ನಂಬಿಕೆ ನನಗೆ ಇದೆ. ಬಿಜೆಪಿ ಹೈಕಮಾಂಡ್ ನನ್ನ ಬಳಿ ಉತ್ತಮ ಬಾಂಧವ್ಯ ಇಟ್ಟುಕೊಂಡಿದೆ. ನಾನು ಭರವಸೆಯಿಂದ ಹೇಳ್ತೀನಿ. ಬಿಜೆಪಿ ಮಂಡ್ಯ ಸೀಟು ಉಳಿಸಿಕೊಳ್ಳುತ್ತೆ. ಕುಮಾರಸ್ವಾಮಿ ಭೇಟಿ ಮಾಡಿದ್ರೆ ನನಗೇನೂ ಅಭ್ಯಂತರ ಇಲ್ಲ. ಕರ್ಟಸಿ ಕಾಲ್ ಆಗಿ ಬಂದು ಭೇಟಿ ಆದ್ರೆ ನನ್ನದೇನು ಅಭ್ಯಂತರ ಇಲ್ಲ. ನಾನು ರಾಜಕೀಯಕ್ಕೆ ಬಂದಿದ್ದೇ ಮಂಡ್ಯದಿಂದ. ಅಂಬರೀಶ್ 4 ಬಾರಿ ಗೆದ್ದಿದ್ದರು. ನನಗೂ ಜನ ಹೆಚ್ಚು ಮತ ಕೊಟ್ರು. ಅಂತಹ ಅಭಿಮಾನ ಬಿಟ್ಟು ಹೋಗೊಲ್ಲ ಎಂದು ತಿಳಿಸಿದ್ದಾರೆ.

ನಾನು ನಿಂತರೆ ಮಂಡ್ಯದಿಂದಲೇ. ಇಲ್ಲ ಅಂದರೆ ನನಗೆ ರಾಜಕೀಯವೇ ಬೇಡ. ಅಂಬರೀಶ್ ಅವರು ನನಗೆ ಜವಾಬ್ದಾರಿ ಬಿಟ್ಟು ಹೋಗಿದ್ದಾರೆ. ಅಂಬರೀಶ್ ಕನಸು ನಾನು ಪೂರೈಕೆ ಮಾಡಬೇಕು. ರಾಜಕೀಯವಾಗಿ ಏನೇನೋ ಆಗೋ ಆಸೆ ನನಗೆ ಇಲ್ಲ. ನಾನು ಮಂಡ್ಯದಿಂದ ಮಾತ್ರ ನಿಲ್ಲೋದು. ಬೇರೆ ಕ್ಷೇತ್ರ ನಿಲ್ಲೋದಿಲ್ಲ. ಬಿಜೆಪಿಯವರು ನನಗೆ ಟಿಕೆಟ್ ಕೊಡ್ತಾರೆ ಅನ್ನೋ ನಂಬಿಕೆ ಇದೆ. ಮಂಡ್ಯದ ಬಗ್ಗೆ ಹೈಕಮಾಂಡ್ ನನ್ನ ಜೊತೆ ಮಾತಾಡಿಲ್ಲ. ಸೀಟು ಹಂಚಿಕೆ ಮಾತುಕತೆ ಇನ್ನೂ ಆಗಿಲ್ಲ ಎಂದಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!