ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಗಾಜಾದ ಮೇಲೆ ಮಾಡುತ್ತಿರುವ ಬಾಂಬ್ ದಾಳಿಯನ್ನು ನಿಲ್ಲಿಸಿದರೆ ಒತ್ತೆಯಾಳಾಗಿ ಇರಿಸಿಕೊಂಡಿರುವ ಎಲ್ಲರನ್ನೂ ಬಿಡುಗಡೆ ಮಾಡುತ್ತೇವೆ ಎಂದು ಹಮಾಸ್ ಉಗ್ರರು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹಮಾಸ್ ಐದು ಸಾವಿರಕ್ಕೂ ಹೆಚ್ಚು ರಾಕೆಟ್‌ಗಳಿಂದ ದಾಳಿ ನಡೆಸಿತ್ತು, ಅಷ್ಟೇ ಅಲ್ಲದೆ ಕಣ್ಣಿಗೆ ಕಂಡ ನಾಗರಿಕರನ್ನು ಕೊಲೆ ಮಾಡಿತ್ತು. ಇದಕ್ಕೆ ಪ್ರತಿದಾಳಿಯಾಗಿ ಇಸ್ರೇಲ್ ಗಾಜಾ ಮೇಲೆ ಬಾಂಬ್ ದಾಳಿ ನಡೆಸಿದೆ.
ಗಾಜಾದ ಮೇಲೆ ಇನ್ನು ಬಾಂಬ್ ದಾಳಿ ಆರಂಭವಾಗುತ್ತದೆ. ನಾಗರಿಕರೆಲ್ಲರೂ ಗಾಜಾದ ದಕ್ಷಿಣ ಭಾಗಕ್ಕೆ ಹೋಗಿ ಎಂದು ಇಸ್ರೇಲ್ ಮೂರು ಗಂಟೆಗಳನ್ನು ನೀಡಿತ್ತು. ಈ ಸಮಯದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಉಳಿಸಿಕೊಂಡಿದ್ದರು.
ಅಲ್ಲಿಂದ ದಾಳಿಗಳು ನಡೆಯುತ್ತಲೇ ಇದ್ದು, ಗಾಜಾ ಮೇಲೆ ಇಸ್ರೇಲ್ ದಾಳಿ ನಿಲ್ಲಿಸಿದ್ರೆ ಒತ್ತೆಯಾಳುಗಳನ್ನು ಬಿಟ್ಟುಬಿಡುತ್ತೇವೆ ಎಂದು ಹಮಾಸ್ ಹೇಳಿದೆ. ದಾಳಿ ನಿಲ್ಲಿಸಿದ ಒಂದು ಗಂಟೆಯಲ್ಲಿ ಎಲ್ಲರನ್ನೂ ಬಿಟ್ಟುಬಿಡುತ್ತೇವೆ ಎಂದು ಹಮಾಸ್ ಹೇಳಿದ್ದು, ಈ ಬಗ್ಗೆ ಇಸ್ರೇಲ್ ನಿಲುವೇನು? ತಿಳಿದುಬಂದಿಲ್ಲ.