ಹೊಸದಿಗಂತ ವರದಿ, ಕಲಬುರಗಿ:
ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ರೈತರ ಹೊಲದಲ್ಲಿನ ಬೆಳೆಗಳಿಗೆ ಸಮಪ೯ಕವಾಗಿ ನೀರು ಪೂರೈಕೆಯಾಗದೆ ಇರುವುದು ದುದೈ೯ವದ ಸಂಗತಿಯಾಗಿದ್ದು,ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ,ಎಲ್ಲರ ಹೊಲಗಳಿಗೆ ಉಚಿತ ವಿದ್ಯುತ್ ಮತ್ತು ನೀರು ಪೂರೈಕೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಆಳಂದ ತಾಲೂಕಿನ ಖಜೂರಿ ಗ್ರಾಮದಿಂದ ಪ್ರಾರಂಭವಾದ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿ, ವಿವಿಧ ಗ್ರಾಮಗಳಿಗೆ ತೆರಳಿ,ಹಲವು ರೈತರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ವಿಷಯವನ್ನು ಅರಿತುಕೊಂಡರು.
ಇದೇ ಸಂದರ್ಭದಲ್ಲಿ ಖಜೂರಿ ಬಳಿ ಧರಣಿ ಮಾಡುತ್ತಿದ್ದ ಕಿಸಾನ್ ಸಭಾ ಕಾಯ೯ಕತ೯ರನ್ನು ಭೇಟಿ ಮಾಡಿ,ನಮ್ಮ ಸಕಾ೯ರ ಬಂದಲ್ಲಿ ದಿನದ 24 ಗಂಟೆ ಕೃಷಿಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದರು. ಈರುಳ್ಳಿ ತೋಟಕ್ಕೆ ಭೇಟಿ ನೀಡಿ,ಸುಮಾರು ಅದ೯ ಗಂಟೆಗಳ ಕಾಲ ಈರುಳ್ಳಿ ಬೆಳೆಗಾರರ ಜೊತೆಗೆ ಸಮಾಲೋಚನೆ ನಡೆಸಿದರು.
ಖಂಡಾಲ ಗ್ರಾಮದಲ್ಲಿ ಸಹ ಈರುಳ್ಳಿ ತೋಟಕ್ಕೆ ಭೇಟಿ ಮಾಡಿ, ರೈತರು ಬೆಳೆದ ಈರುಳ್ಳಿ ಬೆಳೆಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಇಳುವರಿ ಚೆನ್ನಾಗಿದೆ. ಬೆಂಬಲ ಬೆಲೆ ಸಿಗುತ್ತಿಲ್ಲ. ನೀವು ನನಗೆ ಆಶೀರ್ವಾದ ಮಾಡಿದ್ದಲ್ಲಿ,ಸಮಪ೯ಕವಾಗಿ ಬೆಳೆದ ಎಲ್ಲಾ ಬೆಳೆಗಳಿಗೆ ಬೆಲೆ ನೀಡಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆಳಂದ ಕ್ಷೇತ್ರದ ನಾಯಕಿ ಮಹೇಶ್ವರಿ ವಾಲಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಸಾಥ್ ನೀಡಿದರು.