ಹೊಸದಿಗಂತ ವರದಿ ಬಳ್ಳಾರಿ:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ನಿವೇಶನ ಹಂಚಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಸಿ.ಎಂ.ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಕ್ಕಿಹಾಕ್ಕೊಳ್ತಾರೆ. ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ಸಂಡೂರು ಎಸ್ಟಿ ಮೀಸಲು ಕ್ಷೇತ್ರ ವ್ಯಾಪ್ತಿಯ ತೋರಣಗಲ್ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಡಾ ಪ್ರಕರಣದಲ್ಲಿ ಬಿಜೆಪಿ ಅವರು ಸುಳ್ಳು ಆರೋಪ ಮಾಡ್ತಾರೆ, ಅವರ ಕುತಂತ್ರದಿಂದ, ದೂರು ದಾಖಲಾಗಿದೆ ಎಂದು ಸಿದ್ದರಾಮಯ್ಯ ಪ್ರಚಾರ ಸಭೆಯಲ್ಲಿ ಹೇಳ್ತಿದ್ದಾರೆ, ಇದು ಶುದ್ಧ ಸುಳ್ಳು, ಮುಡಾ ಪ್ರಕರಣ ಸಿದ್ದರಾಮಯ್ಯ ಅವರ ಪ್ರಭಾವದಿಂದಲೇ ನಡೆದಿದ್ದು, ಎಂದು ನಾವಲ್ಲ ನ್ಯಾಯಾಲಯವೆ ಸ್ಪಷ್ಟವಾಗಿ ಹೇಳಿದೆ. ಲೋಕಾಯುಕ್ತ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದು, ನಾಟಕಿಯವೇ, ತಪ್ಪು ಯಾರೇ ಮಾಡಿರಲಿ, ಅವರು ತನಿಖೆ ಎದುರಿಸಬೇಕು, ನ್ಯಾಯಾಂಗಕ್ಕೆ ಗೌರವ ಕೊಡಬೇಕು, ಈ ಪ್ರಕಾರವನ್ನು ಸಿಬಿಐ ತನಿಖೆಗೆ ವಹಿಸಿದರೆ ಖಂಡಿತ ಸಿದ್ದರಾಮಯ್ಯ ಅವರು, ಸಿಕ್ಕಿ ಹಾಕಿಕೊಳ್ತಾರೆ ಎಂದರು.
ಕರೋನ ಅವಧಿಯಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದೆ, ಅಕ್ರಮ ನಡೆದಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಅಪಪ್ರಚಾರ ಮಾಡುತ್ತಿದ್ದಾರೆ, ಇದು ಶುದ್ಧ ಸುಳ್ಳು, ಅವಧಿಯಲ್ಲಿ ನಯಾ ಪೈಸೆ ಅಕ್ರಮ ನಡೆದಿಲ್ಲ, ಜನರ ಪ್ರಾಣ ಉಳಿಸಲು ಅವಧಿಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಶ್ರಮಿಸಿದೆ, ದೇಶದ ಪ್ರತಿಯೊಬ್ಬರಿಗೂ ಉಚಿತ ವ್ಯಾಕ್ಸಿನ್ ನೀಡಿ ನಮ್ಮೆಲ್ಲರನ್ನೂ ಪ್ರಧಾನಿ ಮೋದಿ ಅವರು ರಕ್ಷಣೆ ಮಾಡಿದ್ದಾರೆ, ಕಾಂಗ್ರೆಸ್ ನವರ ಈ ಸುಳ್ಳು ಆರೋಪಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.