April 26, 2026
Sunday, April 26, 2026
spot_img

ರಾಹುಲ್ ಗಾಂಧಿ ತನಿಖೆ ಮಾಡಿದ್ರೆ ಮತಗಳ್ಳತನದ ಕುರಿತು ತಿಳಿಯುತ್ತೆ: ಶೋಭಾ ಕರಂದ್ಲಾಜೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಕಲಹಸೃಷ್ಟಿ ಮಾಡಿ ಅಶಾಂತಿ ಹುಟ್ಟಿಸುವುದು ಕಾಂಗ್ರೆಸ್‌ನ ಉದ್ದೇಶ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಮತಗಳ್ಳತನ ಆರೋಪದ ಬಗ್ಗೆ ಮಾತನಾಡಿದ ಅವರು, ಲೋಕಸಭಾ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿಗೆ ಸಾಮಾನ್ಯಜ್ಞಾನ ಇಲ್ಲ. ಕಳ್ಳತನ ಮಾಡುವವರಿಗೆ ಕಳ್ಳತನದ ಬಗ್ಗೆ ಗೊತ್ತಿರುತ್ತದೆ. ಅದೇ ರೀತಿ ರಾಹುಲ್ ಗಾಂಧಿ ಅವರನ್ನು ತಪಾಸಣೆ ಮಾಡಿದ್ರೆ ಮತಗಳ್ಳತನದ ಬಗ್ಗೆ ಎಲ್ಲ ತಿಳಿಯುತ್ತದೆ ಎಂದು ಕಿಡಿಕಾರಿದರು

ಆಳಂದ ಕ್ಷೇತ್ರದ ಬಗ್ಗೆ ರಾಹುಲ್‌ ಆರೋಪ ಮಾಡಿದ್ದಾರೆ. ಆಳಂದದಲ್ಲಿ ಗೆದ್ದಿರುವುದು ಕಾಂಗ್ರೆಸ್ ಅಭ್ಯರ್ಥಿ ಅಲ್ಲವೆ. ಸಿದ್ದರಾಮಯ್ಯ‌ರ ವರುಣ ಕ್ಷೇತ್ರದಲ್ಲೂ ಮನೆ ಸಂಖ್ಯೆ ಜೀರೊ ಇದೆ. 20-25 ಮತದಾರರ ಪಟ್ಟಿ ನೊಡಿದರೆ ಈಗಲೂ ಜೀರೋ ಜೀರೋ ಮನೆ ನಂ. ಇದೆ. ಮಹದೇವಪುರದಲ್ಲೂ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಬಾಡಿಗೆ ಮನೆಯಲ್ಲಿ ಇದ್ದವರು, ಮನೆ ನಂಬರ್ ಎ,ಬಿ,ಸಿ,ಡಿ ಮಾಡಿರ್ತಾರೆ. ಮನೆ ನಂಬರ್ ಸರಿಯಾಗಿ ಫೀಡ್ ಆಗಿರಲ್ಲಾ, ಡಾಟಾ ಆಪರೇಟರ್ ಸರಿಯಾಗಿ ಫೀಡ್ ಮಾಡಿರಲ್ಲ. ಮನೆ ನಂಬರ್ ಎಬಿಸಿಡಿ ಹಾಕಿದರೆ ಆಗುವುದಿಲ್ಲ, ಆಗ ಜೀರೊ ಜೀರೊ ಹಾಕ್ತಾರೆ. ರಾಹುಲ್ ಗಾಂಧಿ ಅವರಿಗೆ ಇದೂ ಅರ್ಥ ಅಗಲ್ಲವೆಂದರೆ ಏನೂ ಹೇಳುವುದು. ಲೋಕಸಭಾ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿಗೆ ಸಾಮಾನ್ಯ ಜ್ಞಾನ ಇಲ್ಲವೆ ಎಂದು ಕಿಡಿಕಾರಿದರು.

ಮಾಲೂರು ಕಾಂಗ್ರೆಸ್ ಶಾಸಕರನ್ನು ಕೋರ್ಟ್ ಅಸಿಂಧುಗೊಳಿಸಿದ್ದು ಯಾಕೆ. ಇದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಬೇಕು. ಮೋಸ ಮಾಡಿದವರು ಯಾರು, ಮೋಸ ಮಾಡಿ 135 ಸ್ಥಾನ ಗೆದ್ದವರು ಕಾಂಗ್ರೆಸ್. ಮಾಲೂರಿನಲ್ಲಿ ಮೋಸ ಮಾಡಿ ಗೆದ್ದವರು ಕಾಂಗ್ರೆಸ್ ನವರು. ರಾಜ್ಯದ ಕಾಂಗ್ರೆಸ್ ಸದ್ಯ ಬರ್ಬಾದ್ ಆಗಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !