Sunday, December 4, 2022

Latest Posts

ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಬಿಜೆಪಿ ಪಕ್ಷಕ್ಕೆ ಗೆಲವು: ಎನ್.ರವಿಕುಮಾರ್

ಹೊಸದಿಗಂತ ವರದಿ,ಕಲಬುರಗಿ:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಯಾವುದೇ ಮೂಲೆಯಲ್ಲಿ ಕಾಲಿಡಲಿ,ಆ ಕ್ಷೇತ್ರದಲ್ಲಿ ಬಿಜೆಪಿ ಗೆ ಗೆಲವು ಕಟ್ಟಿಟ್ಟ ಬುತ್ತಿ.ಹೀಗಾಗಿ ರಾಹುಲ್ ಗಾಂಧಿ ಕಾಲು ಕಬ್ಬಿಣದ ಕಾಲಾಗಿವೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.

ಅವರು ಜಿಲ್ಲೆಯ ಜೇವರ್ಗಿ ತಾಲೂಕಿನ ವಿಧಾನ ಸಭಾ ಕ್ಷೇತ್ರದ 8 ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರ,ಕಾಯ೯ಕತ೯ರ ಸಭೆಯನ್ನು ಉದ್ದೇಶಿಸಿ ಮಾತನಾಡಿ,ದೇಶದ ತುಂಡು ಮಾಡುವ ಹೇಳಿಕೆ ನೀಡಿದ ಕನಯ್ಯಾ ಕುಮಾರ್, ನನ್ನು ಇಟ್ಟುಕೊಂಡು ಬಾರತ ಜೋಡೋ ಕಾಯ೯ಕ್ರಮವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದ್ದು,ಕಾಂಗ್ರೆಸ್ ಪಕ್ಷ ಯಾವತ್ತೂ ಯಶಸ್ಸು ಕಾಣುವುದಿಲ್ಲ ಎಂದರು.

ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಎಷ್ಟೇ ಅಪ್ಪಿಕೊಂಡರು ಸಹ,ನಾಡಿನ ಜನ ಮಾತ್ರ ಕಾಂಗ್ರೆಸ್ ಪಕ್ಷವನ್ನು ಒಪ್ಪಿಕೊಳ್ಳುವುದಿಲ್ಲ. ರಾಷ್ಟ್ರೀಯ ಅಧ್ಯಕ್ಷ ಮಾಡುವ ಸಾಮಥ್ಯ೯ ಇರದ ಪಕ್ಷದವರು,ಭಾರತ ಜೋಡೋ ಮಾಡುತ್ತಿರುವುದು ಅಪಹಾಸ್ಯಕರ ಸಂಗತಿ ಎಂದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಬೇಗ,ಮುಕ್ತವಾಗುತ್ತದೆಯಾ,ಅಷ್ಟೇ ವೇಗವಾಗಿ ಭಾರತ ವಿಶ್ವದಾದ್ಯಂತ ಬಲಿಷ್ಠವಾಗಿ ಹೊರಹೊಮ್ಮುತ್ತದೆ.ದೇಶದ ಕೆಲವು ಕಡೆಗಳಲ್ಲಿ ಮಾತ್ರ ಉಳಿದುಕೊಂಡಿದ್ದು,2023ರ ವಿಧಾನ ಸಭಾ ಚುನಾವಣಾ,2024ರ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚಿಕೊಳ್ಳಲಿದೆ ಎಂದರು.

ಜೇವರ್ಗಿ ಮಂಡಲದ ಪ್ರತಿಯೊಬ್ಬ ಕಾಯ೯ಕತ೯ನೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು-ಬಿಜೆಪಿ ಗೆಲುವು ಎಂಬ ಸಂಕಲ್ಪ ಮಾಡಬೇಕಾಗಿದೆ. ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ ತೋರಿರುವ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಅನಿವಾರ್ಯತೆ ಇದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!