ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯಗೆ ಆತ್ಮ ಸಾಕ್ಷಿ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ ಎಂದು ಬಿಜೆಪಿ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಾನು ಕಳಂಕರಹಿತ ಅಂತ ಹೇಳ್ತಿದ್ದರು. ಇದು ಅವರ ಬಾಯಿಂದ ಹೇಳಿದ್ದೋ, ಅವರ ನಡವಳಿಕೆಯೇ ಇವತ್ತು ಜನರಿಗೆ ಗೊತ್ತಾಗುತ್ತಿದೆ.
ಸಿದ್ದರಾಮಯ್ಯ ಉಪದೇಶ ಕೊಡುತ್ತಿದ್ದರು. ಹೈಕೋರ್ಟ್ ನಲ್ಲಿ ತೀರ್ಪು ಬಂದಿದೆ. ಸಿದ್ದರಾಮಯ್ಯ ನಡೆದುಕೊಳ್ಳುತ್ತಿರುವ ರೀತಿ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನಡೆ ಎಂದು ಆಕ್ರೋಶ ಹೊರಹಾಕಿದ್ದಾರೆ.