ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವ ಮಹಿಳೆಯ ಪರ್ಸ್ ಕದ್ದು ಓಡಿಹೋಗೋದು, ಮಹಿಳೆಯರ ಸರ ಕಿತ್ತು ಓಡಿ ಹೋಗುವ ವಿಡಿಯೋಗಳನ್ನು ನೋಡಿದ್ದೀರಿ.
ಆದರೆ ಇಲ್ಲಿ ಮಹಿಳೆಯೇ ಹೇಗೆ ಕಳ್ಳನನ್ನು ಆಟಾಡಿಸ್ತಾಳೆ ನೋಡಿ.. ಪರ್ಸ್ ಕದಿಯಲು ಬಂದ ಎಂದು ಆಕೆ ಕ್ಷಣಮಾತ್ರದಲ್ಲಿ ತಿಳಿದುಕೊಂಡು, ಪರ್ಸ್ನ್ನು ಸ್ವಲ್ಪ ದೂರಕ್ಕೆ ಎಸೆದುಬಿಡುತ್ತಾಳೆ. ಕಳ್ಳ ಪರ್ಸ್ ತರಲು ಹೋದಾಗ ಆತನ ಸ್ಕೂಟಿ ಹತ್ತಿ ಕೂರುತ್ತಾಳೆ. ಒಂದೆರಡು ಬಾರಿ ಇದೇ ರೀತಿ ಬೈಕ್-ಪರ್ಸ್, ಬೈಕ್-ಪರ್ಸ್ ಎಂದು ಆಟ ಆಡಿಸ್ತಾಳೆ. ಕಡೆಗೆ ರೋಸಿಹೋದ ಕಳ್ಳ ಪರ್ಸ್ ಬಿಟ್ಟು ಗಾಡಿ ತಳ್ಳಿಕೊಂಡು ಹೋಗಿಬಿಡ್ತಾನೆ!
https://twitter.com/swatic12/status/1672984310150832131?s=20