ಹೊಸದಿಗಂತ ವರದಿ, ಹುಬ್ಬಳ್ಳಿ:
ಕುರುಬ ಸಮಾಜಕ್ಕೆ ನ. 11 ರಂದು ಕನಕದಾಸರ ಜಯಂತಿ ಒಳಗಾಗಿ ಎಸ್.ಟಿ ಮೀಸಲಾತಿ ನೀಡದಿದ್ದರೆ ನ. 21 ರಂದು ಬೆಂಗಳೂರಿನ ಫ್ರೀಡಂ ಪಾಕ್೯ ನಲ್ಲಿ ರಾಜ್ಯದ 30 ಜೆಲ್ಲೆಯ ಸಮಾಜದ ಜನರು ಭಾಗವಹಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹಾಲುಮತದ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಶಕದಿಂದ ಮೀಸಲಾತಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ. ಸಮುದಾಯ ಶಿಕ್ಷಣ, ರಾಜಕೀಯ ಹಾಗೂ ಮೂಲ ಸೌಕರ್ಯದಿಂದ ವಂಚಿತವಾಗುತ್ತಿದೆ ಎಂದರು.
2018 ರಲ್ಲಿ ಸಮಿಶ್ರ ಸರ್ಕಾರವಿದ್ದಾಗ ರಾಜ್ಯ ಬುಡಕಟ್ಟು ಸಂಶೋಧನಾ ಇಲಾಖೆ ಎಲ್ಲ ಜಿಲ್ಲೆಯಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸಮಾಜಕ್ಕೆ ಮೀಸಲಾತಿ ನೀಡಬಹುದು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದರು ಮುಂದಾಗುತ್ತಿಲ್ಲ. ಬಳಿಕ ಕಾಂಗ್ರೆಸ್ ಸರ್ಕಾರ ಬಂದಾಗ ಸಮಾಜದವರಾದ ಸಿದ್ದರಾಮಯ್ಯ ಅವರು ಸಹ ನಿರ್ಲಕ್ಷ್ಯ ವಹಿಸಿದರು ಎಂದರು.
ಬಿಜೆಪಿ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಸಮಾಜಕ್ಕೆ ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ಸಮಾಜದ ಶಕ್ತಿ ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರೇಮಾ ನಾಯ್ಕರ, ರ್ಯಾವಪ್ಪ ಐರಾಣಿ, ಮಂಜುನಾಥ ಗುಡ್ಡಣ್ಣವರ, ಅರುಣಕುಮಾರ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ