ದೆಹಲಿಯಲ್ಲಿ ನಿಯಂತ್ರಣ ತಪ್ಪಿದ ವಾಯು ಮಾಲಿನ್ಯ: ಶಾಲೆಗಳಿಗೆ ರಜೆ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ಪ್ರಾಥಮಿಕ ಶಾಲೆಗಳಿಗೆ ರಜೆ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼಹದಗೆಡುತ್ತಿರುವ ಗಾಳಿಯ ಗುಣಮಟ್ಟ ಮತ್ತು ಮಾಲಿನ್ಯ ಮಟ್ಟವು ಇಡೀ ಉತ್ತರ ಭಾರತದ ಸಮಸ್ಯೆಯಾಗಿದ್ದು, ಇದನ್ನು ಪರಿಹರಿಸಲು ಕೇಂದ್ರವು ಕ್ರಮಕೈಗೊಳ್ಳಬೇಕು. “ಇದು ಪರಸ್ಪರರನ್ನು ದೂಷಿಸುವ ಸಮಯವಲ್ಲ, ರಾಜಕೀಯದ ವಿಚಾರವೂ ಅಲ್ಲ. ನಾವೆಲ್ಲರೂ ಸೇರಿ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಸಮಯʼ ಎಂದು ಪ್ರತಿಪಾದಿಸಿದರು.
ಶುಕ್ರವಾರವೂ ಸಹ ದೆಹಲಿಯ ಗಾಳಿಯ ಗುಣಮಟ್ಟವು ಗಂಭೀರ ವಿಭಾಗದಲ್ಲಿ ದಾಖಲಾಗಿದೆ. ಕಣ್ಣು ಮುಚ್ಚಿಸುವ ಮಾಲಿನ್ಯದಿಂದ ನಗರವು ತತ್ತರಿಸುತ್ತಿದೆ. ಶನಿವಾರದಿಂದ ಐದನೇ ತರಗತಿಯವರೆಗಿನ ತರಗತಿಗಳನ್ನು ಮುಚ್ಚಲಾಗುವುದು ಮತ್ತು ಐದನೇ ತರಗತಿಗಿಂತ ಹೆಚ್ಚಿನ ತರಗತಿಗಳ ಮಕ್ಕಳಿಗೆ ಹೊರಾಂಗಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದರು.
“ವಾಹನಗಳ ಓಡಾಟಕ್ಕೆ ಬೆಸ ಬೆಸ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆಯೂ ನಾವು ಯೋಚಿಸುತ್ತಿದ್ದೇವೆ” ಎಂದು ಅವರು ಹೇಳಿದರು. ಪಂಜಾಬ್‌ನಲ್ಲಿ ನಡೆಯುತ್ತಿರುವ ಹೊಲಗಳ ಕೂಳೆ ಸುಡುವಿಕೆ ತಡೆಯುವುದು ತನ್ನ ಪಕ್ಷದ ಜವಾಬ್ದಾರಿಯಾಗಿದೆ ಎಂದು ಕೇಜ್ರಿವಾಲ್ ಒಪ್ಪಿಕೊಂಡರು. “ನಮ್ಮ ಸರ್ಕಾರ ಪಂಜಾಬ್‌ನಲ್ಲಿ ಇರುವುದರಿಂದ, ಹೊಲಗಳ ಕೂಳೆ ಸುಡುವಿಕೆಗೆ ನಾವೇ ಹೊಣೆ. ನಾವು ಅಲ್ಲಿ ಸರ್ಕಾರವನ್ನು ರಚಿಸಿ ಕೇವಲ ಆರು ತಿಂಗಳಾಗಿದೆ ಮತ್ತು ಅಲ್ಲಿ ಸಮಸ್ಯೆಗಳಿವೆ, ನಾವು ಪರಿಹಾರಗಳನ್ನು ಹುಡುಕುತ್ತಿದ್ದೇವೆ. ನಾವು ಸಮಸ್ಯೆ ಪರಿಹರಿಸಲು ಒಂದು ವರ್ಷದ ಸಮಯ ನೀಡಿʼ ಎಂದು ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!